ಭಾರತೀಯ ಇತಿಹಾಸದ ಅತೀ ಸುಂದರ ರಾಜಕುಮಾರಿಯರು

Updated on 24 Apr, 2017 at 2:38 pm

Advertisement

ರಾಜಕುಮಾರ ಮತ್ತು ರಾಯಕುಮಾರಿಯರ ಕತೆಗಳು ಯಾವಾಗಲೂ ನಮ್ಮ ಆಸಕ್ತಿಯನ್ನು ಕೆರಳಿಸುತ್ತವೆ. ಡಯನಾಳಿಂದ ಹಿಡಿದು ಬ್ರಿಟನ್ನಿನ ರಾಣಿಯವರೆಗೆ ರಾಜಕುಮಾರಿಯರ ಕತೆ ನಮಗಿಷ್ಟ. ಭಾರತೀಯ ಇತಿಹಾಸದಲ್ಲೂ ಸಾಕಷ್ಟು ರೋಚಕ ಕತೆಗಳು ರಾಜಕುಮಾರಿಯರ ಸುತ್ತಲಿವೆ. ರಾಜಕುಮಾರಿ ಅಂದಾಕ್ಷಣ ಕಣ್ಣ ಮುಂದೆ ಸುಂದರ, ಗತ್ತಿನ , ರಾಜಮನೆತನದ ಹೆಣ್ಣಿನ ಚಿತ್ರ ಬರುತ್ತದೆಯಲ್ಲವೇ. ಅತೀ ಸುಂದರ  ಕೆಲವು ಭಾರತೀಯ ರಾಜಕುಮಾರಿಯರ  ಪಟ್ಟಿ ಇಲ್ಲಿದೆ.

೧೦. ಅಕ್ಕಾದೇವಿ:

ಕರ್ನಾಟಕದ ಚಾಲುಕ್ಯರ ರಾಣಿಯಾಗಿದ್ದ ಈಕೆ ತುಂಬಾ ತುಂಬಾ ಚೆಲುವೆ. ಪಶ್ಚಿಮ ಚಾಲುಕ್ಯರ ರಾಣಿಯಾಗಿದ್ದ ಈಕೆ ತನ್ನ ಸೌಂದರ್ಯ ಮತ್ತು ಆಡಳಿತಾತ್ಮಕ ಕೌಶಲ್ಯದಿಂದ ಹೆಸರುವಾಸಿಯಾಗಿದ್ದಳು. ಇವಳ ಆಡಳಿತದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು  ನೀಡಲಾಗುತ್ತಿತ್ತು.  ಜೈನ ಮತ್ತು ಹಿಂದೂ ದೇವಾಲಯಗಳ ಎದೆಗೆ ಈಕೆಯದು ತುಂಬಾ ವಿಶಾಲ ಮನೋಭಾವ ಇತ್ತಂತೆ.

೯. ನೂರ್ ಇನಾಯತ್ ಖಾನ್ :

ಭಾರತೀಯ ಮುಸ್ಲಿಂ ರಾಜಮನೆತನದ ಹಜರತ್ ಇನಾಯತ್ ಖಾನ್ ನ ದೊಡ್ಡ ಮಗಳಾಗಿದ್ದಳು ಈಕೆ. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಈಕೆ ಸ್ಪೆಷಲ್ ಆಪರೇಷನ್ಸ್ ಎಸ್ಎಕ್ಯುಟಿವ್ (SOE) ಅಂತಾ ಕೆಲಸ ಮಾಡಿದ್ದಳು. ಫ್ಫ್ರೆಂಚರ  ಹತ್ತಿಕ್ಕಲು ಬ್ರಿಟನ್ ನಿಂದ ಫ್ರಾನ್ಸ್ ಆಕ್ರಮಿತ ಪ್ರದೇಶಕ್ಕೆ ಕಳುಹಿಸಲ್ಪಟ್ಟ ಮೊದಲ ರೇಡಿಯೋ ಆಪರೇಟರ್ ಈಕೆ. ಜರ್ಮನಿ ಯ ಕಾನ್ಸಂಟ್ರೇಶನ್  ಅಸು ನೀಗಿದಳು. ಆಗ ಆಕೆಗೇ ಕೇವಲ ೩೦ ವರ್ಷ ವಯಸ್ಸಾಗಿತ್ತು. ಅತ್ಯಂತ ರೋಚಕವಾದ ಜೀವನವನ್ನು ನಡೆಸಿದ ಈಕೆ ಅಪ್ರತಿಮ ಚೆಲುವೆಯಾಗಿದ್ದಳು.


Advertisement

೮. ಮೀರಾಬಾಯಿ :

ಕೃಷ್ಣಾ ಭಗವಂತನ ಭಕ್ತೆಯಾಗಿದ್ದ ಈಕೆ , ಭಾರತೀಯ ರಾಜಕುಮಾರಿ. ವೈಷ್ಣವ ಚಳುವಳಿಯ ಅತಿ ಮುಖ್ಯ ಜನರಲ್ಲಿ ಈಕೆ ಕೂಡಾ ಒಬ್ಬಳು. ಈಕೆ ತನ್ನ ಪದ್ಯ ಮತ್ತು ಹಾಡುಗಾರಿಕೆಯಿಂದ ಪ್ರಸಿದ್ಧಿಯನ್ನು ಪಡೆದಿದ್ದಳು. ಸಮ್ಮೋಹಿತಗೊಳಿಸುವಂತಹ ಚೆಲುವು ಅವಳದಾಗಿತ್ತು. ಆಕೆಯ ಕತೆಗಳು ತುಂಬಾ ಪ್ರಸಿದ್ಧವಾಗಿವೆ. ಕೃಷ್ಣನ ಕಡೆಗಿನ ಆಕೆಯ ಪ್ರೀತಿ ಮತ್ತು ಭಕ್ತಿ ಆಕೆಯನ್ನು ಇನ್ನೂ  ಕೂಡಿಸಿವೆ.

೭. ರಾಣಿ ಲಕ್ಷ್ಮೀಬಾಯಿ :

ವಾರಣಾಸಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಈಕೆಯ ಮೂಲ ಹೆಸರು ಮಣಿಕರ್ಣಿಕಾ. ಝಾನ್ಸಿಯ ಮಹಾರಾಜ ರಾಜಾ ಗಂಗಾಧರನನ್ನು ಮದುವೆಯಾದ ಮೇಲೆ ಈಕೆಯ ಹೆಸರು ಲಕ್ಷ್ಮೀಬಾಯಿ ಅಂತಾ ಬದಲಾಯಿತು. ಮರಾಠರ ಆಳ್ವಿಕೆಯ ಝಾನ್ಸಿ ಪ್ರದೇಶದ ರಾಣಿಯಾಗಿದ್ದಳು ಈಕೆ. ಹಗ್ ರೋಸ್ ಎಂಬುವನು ಬರೆದಿರುವ ಪ್ರಕಾರ ಈಕೆ, ಚಾಣಾಕ್ಷಳೂ, ಸೌಂದರ್ಯವತಿಯೂ ಆಗಿದ್ದಳಂತೆ . ಭಾರತದ ಶ್ರೇಷ್ಠ ಹೋರಾಟಗಾರರಲ್ಲಿ ಈಕೆಯೂ ಒಬ್ಬಳು.

೬. ಕಪುರ್ತಲಾದ ಸೀತಾ ದೇವಿ :

ಕರಮ್ ರಾಜಕುಮಾರಿ ಅಂತಾ ಈಕೆ ಪ್ರಸಿದ್ಧಳಾಗಿದ್ದಳು. ಕಾಶೀಪುರದ ರಾಜನ ಮಗಳಾಗಿದ್ದಳು ಈಕೆ. ಯೂರೋಪಿನ ಹಲವು ಭಾಷೆಗಳನ್ನು ಬಲ್ಲವಳಾಗಿದ್ದ ಈಕೆ ಫ್ಯಾಶನ್ ಬಗ್ಗೆ ಕಾಳಜಿ ಹೊಂದಿದ್ದಳು. ಆಗಿನ ಕಾಲದಲ್ಲಿ ಈಕೆ ವಿವಿಧ ವಿನ್ಯಾಸದ ಡ್ರೆಸ್ ಮತ್ತು ಆಭರಣಗಲ್ಲಿ ಕಂಗೊಳಿಸುತ್ತಿದ್ದಳು.

೫. ರಾಣಿ ವಿಜಯಾ ದೇವಿ :

ಮೈಸೂರಿನ ಒಡೆಯರ್ ಮನೆತನಕ್ಕೆ ಸೇರಿದ ರಾಜಕುಮಾರಿ ಈಕೆ. ಮಹಾರಾಜಾ ಜಯಚಾಮರಾಜ ಒಡೆಯರ್ ಅವರ ಸಹೋದರಿಯೂ, ಕಂಠೀರವ ನರಸಿಂಹರಾಜ ಒಡೆಯರ್ ಅವರ ಮಗಳಾಗಿದ್ದಳು ಈಕೆ. ವೀಣೆ ಮತ್ತು ಸಂಗೀತದಲ್ಲಿ ಅತೀವ ಆಸಕ್ತಿಯಿದ್ದ ಈಕೆ , ಲಂಡನ್ನಿನ ಟ್ರಿನಿಟಿ ಮ್ಯೂಸಿಕ್ ಕಾಲೇಜಿಗೆ ಸಂಗೀತ ಕಲಿಯಲು ಹೋಗಿದ್ದಳು. ೧೯೪೧ ರಲ್ಲಿ ಕೋಟಿಡಾ-ಸಂಗನಿ ಯ ಠಾಕೂರ್ ಸಾಹೇಬರನ್ನು ಮದುವೆಯಾಗಿದ್ದಳು. ಪಿಯಾನೋ ನುಡಿಸುವುದರಲ್ಲಿ ಪ್ರವೀಣೆಯಾಗಿದ್ದ ಈಕೆ ಸೌಂದರ್ಯವತಿಯಾಗಿದ್ದಳು.೪.  ಬರೋಡಾದ ಸೀತಾದೇವಿ :

ಮಿರ್ಜಾಪುರದ ಮಹಾರಾಣಿ ಚಿನ್ನಮಾಂಬ ಮತ್ತು ಪೀತಂಪುರದ ಮಹಾರಾಜ ದಂಪತಿಗಳಿಗೆ ಮಗಳಾಗಿ ಜನಿಸಿದ್ದಳು ಈಕೆ. ತನ್ನ ವೈಭವೋಪಿತ ಜೀವನ ಶೈಲಿಗೆ ಮನೆಮಾತಾಗಿದ್ದ ಈಕೆಗೆ ಭಾರತದ ವಾಲ್ಲಿಸ್ ಸಿಂಪ್ಸನ್ ಅಂತಾ ಜನ ಕರೆಯುತ್ತಿದ್ದರು. ಬರೋಡಾದ ಮಹಾರಾಜ ಪ್ರತಾಪಸಿಂಹ ಗಾಯಕ್ವಾಡ್ ರನ್ನು ಮದುವೆಯಾಗಿ ಈಕೆ ರಾಜಕುಮಾರಿಯಾದಳು. ವರ್ಣರಂಜಿತ ವ್ಯಕ್ತಿತ್ವದ ಈಕೆಯದು ಸ್ನಿಗ್ಧ ಸೌಂದರ್ಯ.

೩. ಮಹಾರಾಣಿ ಗಾಯತ್ರಿ ದೇವಿ :

ಕೂಚ್ ಬೆಹರ್ ನಲ್ಲಿ  ರಾಜಕುಮಾರಿಯಾಗಿ ಜನಿಸಿದ್ದ ಈಕೆ ಮುಂದೆ ಜೈಪುರದ ರಾಜಮಾತಾ ಅಂತಾ ಪ್ರಸಿದ್ಧಿ ಪಡೆದಳು. ಮಹಾರಾಜಾ ಸವಾಯಿ ಮಾನ್ಸಿಂಗ್ ರನ್ನು  ಮದುವೆಯಾದ ಮೇಲೆ ಜೈಪುರದ ಮೂರನೆಯ ಮಹಾರಾಣಿಯಾದಳು. ಫ್ಯಾಷನ್ ಬಗ್ಗೆ ಆಸಕ್ತಿ ಹೊಂದಿದ್ದ ಈಕೆ ಆಗಿನ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿದ್ದಳು.

೨. ರಾಣಿ ಪದ್ಮಿನಿ :

ಚಿತ್ತೋರ್ ನ ರಾಣಿಯಾಗಿದ್ದ ಈಕೆ ತುಂಬಾ ಸುಂದರಿಯಾಗಿದ್ದಳು. ಮಲಖಾನ್ ಸಿಂಗ್ ನನ್ನ ಸ್ವಯಂವರದಲ್ಲಿ ಸೋಲಿಸಿ, ರಾವಲ್ ರತನ್ ಸಿಂಗ್ ಈಕೆಯನ್ನು  ಮದುವೆಯಾಗಿದ್ದ. ಅಲ್ಲಾವುದ್ದೀನ ಖಿಲ್ಜಿ ಚಿತ್ತೋರ್ ಮೇಲೆ ದಾಳಿ ಮಾಡಿದ್ದು ಈ ಚೆಲುವೆಯನ್ನು ವಶಪಡಿಸಿಕೊಳ್ಳಲು ಅಂತಾ ಜನ  ಹೇಳುತ್ತಾರೆ.

೧. ಸಂಯುಕ್ತಾ :

ಕನೌಜ ನ ರಾಜ ಜೈಚಂದ ನ ಮಗಳಾಗಿ ಹುಟ್ಟಿದ್ದ ಈಕೆ ಮುಂದೆ ದೆಹಲಿಯ ಮಹಾರಾಜಾ ಪೃಥ್ವಿರಾಜ್ ಚೌಹಾಣ್ ನ ಮಡದಿಯಾದಳು. ಮಧ್ಯಕಾಲೀನ ಭಾರತದ ಸಮಯದಲ್ಲಿ ಸಂಯುಕ್ತಾ ಮತ್ತು ಪೃಥ್ವಿರಾಜನ ಪ್ರೇಮಕತೆ ತುಂಬಾ ಪ್ರಸಿದ್ಧಿ ಪಡೆದಿದೆ.


Advertisement

आपके विचार


  • Advertisement