ತೆನಾಲಿ ರಾಮನ ಬಗೆಗಿನ ಈ ಸಂಗತಿಗಳು ನಿಮಗೆ ಗೊತ್ತೆ

Updated on 24 Apr, 2017 at 2:38 pm

Advertisement

ಈಗಿನ ಕಾಲದ ಮಕ್ಕಳಿಗೆ ತೆನಾಲಿ ರಾಮ ಕಾರ್ಟೂನಿನ ಮುಖಾಂತರ ಗೊತ್ತು. ಆದರೆ, ಆತನ ಪಾಂಡಿತ್ಯ ತುಂಬಾ ಅಗಾಧವಾದದ್ದು. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿರಾಮ ಬಗ್ಗೆ ಗೊತ್ತಿರದ ಸಾಕಷ್ಟು ಅಂಶಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ  ಕೊಡಲಾಗಿದೆ.

೧. ತೆನಾಲಿ ರಾಮಕೃಷ್ಣ (ಮೊದಲಿನ ಹೆಸರು -ರಾಮಲಿಂಗ) ಕೃಷ್ಣದೇವರಾಯನ ಆಸ್ಥಾನದಲ್ಲಿ ‘ವಿಕಟಕವಿ’ ಆಗಿದ್ದ. ಕೃಷ್ಣದೇವರಾಯನ ಸಾಮ್ರಾಜ್ಯ ೧೫೦೯-೧೫೨೯ ರ ಸಮಯದಲ್ಲಿತ್ತು.

Fountain World

೨. ಅಕ್ಬರ್ ನ ಆಸ್ಥಾನದಲ್ಲಿ ನವರತ್ನಗಳು ಹೇಗಿದ್ದವೋ, ಅದೇ ತರಹ ಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟ ದಿಗ್ಗಜರು ಅಂತಾ ಇದ್ದರು. ಈ ಅಷ್ಟ ದಿಗ್ಗಜರನ್ನು ಮಹಾ ಪಂಡಿತರೆಂದು ಭಾವಿಸಲಾಗುತ್ತಿತ್ತು. ಅದರಲ್ಲಿ ತೆನಾಲಿ ರಾಮ ಕೂಡ ಒಬ್ಬನಾಗಿದ್ದ.

Online Stories

೩. ಹುಟ್ಟಿನಿಂದ ಶೈವ ನಾಗಿದ್ದ ಈತ ಆಮೇಲೆ, ತನ್ನ ಧರ್ಮವನ್ನು ವೈಷ್ಣವಕ್ಕೆ ಬದಲಾಯಿಸಿಕೊಂಡಿದ್ದ. ಅದಾದ ಮೇಲೆಯೇ ಆತ ತನ್ನ ಹೆಸರನ್ನು ರಾಮಲಿಂಗ ದಿಂದ ರಾಮಕೃಷ್ಣ ಅಂತಾ ಬದಯಯಿಸಿದ್ದು.


Advertisement
Fountain World

೪. ಹದಿನಾರನೆಯ ಶತಮಾನದ ಆದಿಯಲ್ಲಿ ಈತ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ್ದ.

Chotoonz

೫. ಆಂಧ್ರ ಪ್ರದೇಶದ ಗುಂಟೂರಿನ ತೆನಾಲಿ ಎಂಬ ಗ್ರಾಮದಲ್ಲಿ ಈತ ಜನಿಸಿದ್ದ ಅಂತಾ ಜನರ ನಂಬಿಕೆ.

Distancebetweencities

೬. ಈತನ ತಂದೆಯ ಹೆಸರು ಗರ್ಲಾಪತಿ ರಾಮಯ್ಯ. ತೆನಾಲಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಪೂಜಾರಿಯಾಗಿದ್ದರು.

Panoramia

೭. ಈತ ಚಿಕ್ಕಂದಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡ. ತಂದೆಯ ಸಾವಿನ ನಂತರ ಈತ ತನ್ನ ಚಿಕ್ಕಪ್ಪನ ಮನೆಯಲ್ಲಿ ಬೆಳೆದ.Chotoonz

೮. ಈತನಿಗೆ ಸುಲಭವಾಗಿ ವಿದ್ಯಾಭ್ಯಾಸ ದಕ್ಕಿರಲಿಲ್ಲ. ಜಾತಿಯಿಂದ ಶೈವ ನಾಗಿದ್ದರಿಂದ ಅವನಿಗೆ ವಿದ್ಯಾಭ್ಯಾಸದಿಂದ ವಂಚಿತನಾಗಬೇಕಾಯ್ತು.

Chotoonz

೯.  ಭಾಗವತ ಗುಂಪಿನ ಸದಸ್ಯನಾಗಿ ಈತ ವಿಜಯನಗರವನ್ನು ಪ್ರವೇಶಿಸಿದ.

Chotoonz

೧೦. ಹೀಗೆ ವಿಜಯನಗರವನ್ನು ಪ್ರವೇಶಿಸಿದ್ದ ಈತನ ಪಾಂಡಿತ್ಯಕ್ಕೆ ಮೆಚ್ಚಿ ಕೃಷ್ಣದೇವರಾಯ ಈತನಿಗೆ ‘ ಹಾಸ್ಯಕವಿ’ ಯ ಪಟ್ಟ ನೀಡಿ ತನ್ನ ಆಸ್ಥಾನದಲ್ಲಿಯೇ ಉಳಿಸಿಕೊಂಡ. ಕೊನೆಗೆ ಅಷ್ಟ ದಿಗ್ಗಜರಲ್ಲಿ ಈತನೂ ಒಬ್ಬನಾದ.

Chotoonz

೧೧. ತನ್ನ ಸಮಯೋಚಿತ ಪಾಂಡಿತ್ಯ ಮತ್ತು ಚಾಣಾಕ್ಷತನದಿಂದ ಈತ ವಿಜಯನಗರ ಸಾಮ್ರಾಜ್ಯವನ್ನು ದೆಹಲಿ ಸುಲ್ತಾನನಿಂದ ರಕ್ಷಿಸಿದ ಅಂತಾ ಭಾವಿಸಲಾಗುತ್ತದೆ.

Chotoonz

೧೨. ಅಕ್ಬರ್ ನ ಆಸ್ಥಾನದಲ್ಲಿ ಬೀರಬಲ್ ಹೇಗಿದ್ದನೋ ಹಾಗೆ ಕೃಷ್ಣದೇವರಾಯನ ಆಸ್ಥಾನದಲ್ಲಿ ತೆನಾಲಿ ರಾಮನಾಗಿದ್ದ. ಅಕ್ಬರ್- ಬೀರಬಲ್ ಮತ್ತು ಕೃಷ್ಣದೇವರಾಯ-ತೆನಾಲಿ ರಾಮ , ಹೀಗೆ ಜೋಡಿಯಾಗಿ ಹೆಸರನ್ನು ತೆಗೆದುಕೊಳ್ಳುವುದು ಸಾಮಾನ್ಯ.

 

Chotoonz

೧೩. ಈತ ರಚಿಸಿದ ಪಾಂಡುರಂಗ ಮಹಾತ್ಮೆ ಅನ್ನುವ ಕಾವ್ಯ ತೆಲುಗು ಭಾಷೆಯ ಐದು ಶ್ರೇಷ್ಠ ಕಾವ್ಯಗಳಲ್ಲಿ ಒಂದು.

Chotoonz

೧೪. ತೆಲುಗು ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ತೆನಾಲಿ ರಾಮನ ಪಾತ್ರವನ್ನು ಮಾಡಿದ್ದರೆ, ತಮಿಳಿನಲ್ಲಿ ಶಿವಾಜಿ ಗಣೇಶನ್ ಮತ್ತು ಕನ್ನಡಲ್ಲಿ ನರಸಿಂಹ ರಾಜು ಅವರು  ಮಾಡಿದ್ದಾರೆ.

Sivaji

೧೫. ತೆನಾಲಿರಾಮನ ಕಾಲ್ಪನಿಕ ಜೀವನಗಾಥೆಯನ್ನು ಆಧರಿಸಿ, ‘ ದಿ ಅಡ್ವೆಂಚರ್ಸ್ ಆಫ್ ತೆನಾಲಿ ರಾಮ (ತೆನಾಲಿ ರಾಮನ ಸಾಹಸಗಳು) ‘  ಅನ್ನುವ ಹೆಸರಿನ ಧಾರಾವಾಹಿಯನ್ನು ಕಾರ್ಟೂನ್ ನೆಟ್ವರ್ಕ್ ತಯಾರಿಸಿತ್ತು.

 Chotoonz

 ೧೬. ಈತ ಬೀರಬಲ್ ನಷ್ಟು ಶ್ರೀಮಂತನಾಗಿರಲಿಲ್ಲ


Advertisement
Chotoonz

आपके विचार


  • Advertisement