Topyaps Logo

Topyaps Logo Topyaps Logo Topyaps Logo Topyaps Logo

Topyaps menu

Responsive image

ಪ್ರಾಚೀನ ಈಜಿಪ್ತಿನ ಬಗೆಗಿನ ಈ ಸಂಗತಿಗಳನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ

Updated on 24 April, 2017 at 2:32 pm By

ಈಜಿಪ್ತ್ ಅಂದಾಕ್ಷಣ ತಲೆಯಲ್ಲಿ ಮಮ್ಮಿ ಯ ವಿಚಾರ ಮೂಡುತ್ತದೆ. ಅದರ ಜೊತೆಜೊತೆಗೆ ವಿಧ್ವಂಸಕ ಶಕ್ತಿಗಳ ಬಗ್ಗೆಯೂ ಯೋಚನೆ ಬರುತ್ತದೆ. ಹೆಚ್ಚು ಹೆಚ್ಚು ಅದರ ಬಗ್ಗೆ ತಿಳಿಯುತ್ತಾ ಹೋದಂತೆ ಅದರ ಬಗ್ಗೆ ಗೊಂದಲ ಹೆಚ್ಚಾಗುತ್ತಾ ಹೋಗುತ್ತದೆ. ಈಜಿಪ್ತ್ ಬಗೆಗಿನ ಈ ಕೆಲವು ವಿಚಿತ್ರ ಸಂಗತಿಗಳು ಗೊತ್ತೇ

೧. ಪ್ರಾಚೀನ ಈಜಿಪ್ತಿಯನ್ನರಿಗೆ ಕೂದಲು ಅಂದರೆ ಆಗಿ ಬರುತ್ತಿರಲಿಲ್ಲ


Advertisement

ಅವರು ಕೂದಲನ್ನು ಬಹುವಾಗಿ ದ್ವೇಷಿಸುತ್ತಿದ್ದರಂತೆ . ದೇಹದ ಮೇಲೆ ಕೂದಲನ್ನು ಇಟ್ಟುಕೊಳ್ಳುವುದನ್ನು ಅವರು ಅಶುಚಿ ಅಂತಾ ಭಾವಿಸುತ್ತಿದ್ದರಂತೆ. ಈಜಿಪ್ತ್ ನ ಕೆಲ ದೃಶ್ಯ ಅಥವಾ ಚಿತ್ರಗಲ್ಲಿ ಕಂಡುಬರುವ ಕೂದಲು ಅವರು ಹಾಕಿಕೊಂಡಿದ್ದ ವಿಗ್ ಗಳದ್ದಂತೆ!

 

೨. ಈಜಿಪ್ತ್ ನ ಜನರೆಲ್ಲಾ ಮೇಕ್ ಅಪ್ ಮಾಡಿಕೊಳ್ಳುತ್ತಿದ್ದರಂತೆ

ಈಜಿಪ್ತಿನಲ್ಲಿ ಮೇಕ್ ಅಪ್ ಹೆಚ್ಚು ಕಡಿಮೆ ಅವಶ್ಯಕತೆಯಾಗಿತ್ತು. ಕಣ್ಣಿನ ಸುತ್ತಲಿನ ಕಪ್ಪು ಮತ್ತು ಹಸಿರು ಬಣ್ಣ ಅವರ ಕಣ್ಣನ್ನು ಸೊಳ್ಳೆ ಮತ್ತಿತರ ಹುಳುಗಳಿಂದ ಕಾಪಾಡುತ್ತಿತ್ತು. ಆದರೆ, ಗುಲಾಮರು ಅಥವಾ ಕೆಲಸಗಾರರಿಗೆ ಮೇಕ್ ಅಪ್ ಮಾಡಿಕೊಳ್ಳುವ ಸೌಲಭ್ಯ ಇರಲಿಲ್ಲ.

 

೩. ಬಾಯಿಯ ಶುಚಿತ್ವದ ಕಡೆಗೆ ಅವರು ಹೆಚ್ಚು ಗಮನ ನೀಡುತ್ತಿದ್ದರು


Advertisement

ಆಗಿನ ಕಾಲದಲ್ಲೇ ಅವರು ಟೂಥ್ ಪೇಸ್ಟ್ ತರಹದ ವಸ್ತುವನ್ನು ಉಪಯೋಗಿಸುತ್ತಿದ್ದರಂತೆ! ಅವರಿಗೆ ಹಲ್ಲುಗಳ ಬಗ್ಗೆ ಎಷ್ಟು ಕಾಳಜಿ ಇತ್ತೆಂದರೆ, ಅವರು ಮಮ್ಮಿಗಳ ಪಕ್ಕ ಟೂತ್ ಪಿಕ್  ( ಹಲ್ಲು ಸ್ವಚ್ಛಮಾಡಲು ಉಪಯೋಗಿಸುವ ) ತಪ್ಪದೆ ಇಡುತ್ತಿದ್ದರು.

 

೪. ಮೊದಲು ಅವರು ವ್ಯಕ್ತಿಗಳ ಜೊತೆ ಅವರ ಸೇವಕರನ್ನು ಹೂಳುತ್ತಿದ್ದರು

ವ್ಯಕ್ತಿಗಳು ಸತ್ತರೆ, ಅವರ ಪಕ್ಕ ಅವರ ಸೇವಕರನ್ನು ಹೂಳುತ್ತಿದ್ದರು. ಜೀವಂತ  ಸೇವಕನನ್ನು ಪ್ರಜ್ಞೆ ತಪ್ಪುವಂತೆ ಮಾಡಿ, ಆಮೇಲೆ ಅವನನ್ನು ವ್ಯಕ್ತಿಯ ಜೊತೆ ಹೂಳಲಾಗುತ್ತಿತ್ತು. ಆಮೇಲಾಮೇಲೆ ಸೇವಕರ ಪ್ರತಿರೂಪವನ್ನು ಹೂಳುವ ಪ್ರಕ್ರಿಯೆ ಶುರುವಾಯಿತು.

 

೫. ಒಂದಾನೊಂದು ಕಾಲದಲ್ಲಿ ಬಹುಸಂಖ್ಯಾತ ಈಜಿಪ್ತಿಯನ್ನರು ಕ್ರಿಶ್ಚಿಯನ್ನರಾಗಿದ್ದರು

ಕ್ರಿ ಶ ೪೦೦-೮೦೦  ರ ಸಮಯದಲ್ಲಿ ಬಹಳಷ್ಟು ಜನ ಈಜಿಪ್ತಿಯನ್ನರು ಕ್ರಿಶ್ಚಿಯನ್ನರಾಗಿದ್ದರು.  ೧೦ ನೇ ಶತಮಾನದಲ್ಲಿ ಮುಸ್ಲಿಮರ ಆಕ್ರಮಣವಾದ ಮೇಲೆ ಅಲ್ಲಿ ಮುಸ್ಲಿಂ ಧರ್ಮ ಪ್ರಬಲವಾಯಿತು. ಹಳೆಯ ಭಾಷೆಯೂ ನಶಿಸಿ, ಅಲ್ಲಿ ಅರೇಬಿಕ್ ಭಾಷೆ ಪ್ರಬಲವಾಗುತ್ತಾ ಬಂತು. 

೬. ಕ್ಲಯೋಪಾತ್ರ ನಿಜವಾದ ಈಜಿಪ್ತಿಯನ್ ಅಲ್ಲ

ಅಲೆಕ್ಸಾಂಡರ್ ನ ದಂಡಾಧಿಪತಿಯಾಗಿದ್ದ ಟೋಲೊಮಿ ವಂಶಕ್ಕೆ ಕ್ಲಯೋಪಾತ್ರ ಸೇರಿದವಳಂತೆ. ಟೋಲೊಮಿಯ ಸಾಮ್ರಾಜ್ಯ ಕ್ರಿ ಪೂ ೩೨೩-೩೦ ರ ಸಮಯದಲ್ಲಿ ಚಾಲ್ತಿಯಲ್ಲಿತ್ತು.

 

೭. ಈಜಿಪ್ತಿಯನ್ನರು ಸ್ಥೂಲಕಾಯದವರಾಗಿದ್ದರು

ಈಗಿನ ಜನ ಈಜಿಪ್ತಿನ ಜನರನ್ನು ತುಂಬಾ ಸ್ಲಿಮ್ ಅಂತಾ ಅಂದುಕೊಂಡಿದ್ದಾರೆ. ಆದರೆ, ಪ್ರಾಚೀನ ಈಜಿಪ್ತಿನ ಜನ ಸ್ಥೂಲ ಕಾಯದವರು ಅಂತಾ ಕೆಲವು ಪರೀಕ್ಷೆಗಳು ಹೇಳುತ್ತವೆ. ಅವರ ಆಹಾರದಲ್ಲಿ ಬಿಯರ್, ವೈನ್, ಜೇನು, ಸಕ್ಕರೆ ಪದಾರ್ಥಗಳು ಹೆಚ್ಚಾಗಿರುತ್ತಿದ್ದವು. ಅಲ್ಲದೆ, ಅವರಲ್ಲಿ ಬಹಳಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದರಂತೆ!

 

೮. ಶಾಂತಿ ಕಾಯಿದೆ ಹೊಂದಿದ್ದ ಮೊದಲ ರಾಷ್ಟ್ರ ಈಜಿಪ್ತ್

ಈಜಿಪ್ತಿನಲ್ಲಿ ಸುಮಾರು ಎರಡು ಶತಮಾನಗಳ ಕಾಲ ಯುದ್ಧ ಇತ್ತು. ಆದರೆ, ಆಮೇಲೆ ಸಹ ಯಾರಿಗೆ ಸಿಕ್ಕಿತೆಂದು ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಆಮೇಲೆ ಅಲ್ಲಿ ಶಾಂತಿ ನೆಲೆಸಿತ್ತು.

 

೯. ಗಣಿತದಲ್ಲಿ ಅವರ ಜ್ಞಾನ ಅಸಾಧಾರಣವಾಗಿತ್ತು

ಅಲ್ಲಿನ ಮುಖ್ಯ ಮಂದಿರವಾದ ಅಬು ಸಿಂಬೆಲ್ ಅನ್ನು ತೆಗೆದುಕೊಳ್ಳಿ. ವರ್ಷಕ್ಕೆರಡು ಸಲ ಕರಾರುವಕ್ಕಾಗಿ ಅಲ್ಲಿ ಮಂದಿರದ ಒಳಗಿನ ಮೂರ್ತಿಗಳ ಮೇಲೆ ಸೂರ್ಯನ ಬೆಳಕು  ಬೀಳುತ್ತದೆ. ಅವರ ಗಣಿತದ ಮೇಲಿನ ಪ್ರಭುತ್ವಕ್ಕೆ ಇದೊಂದು ನಿದರ್ಶನ ಅಷ್ಟೇ.


Advertisement

 

Advertisement

नई कहानियां

WAR Full Movie Leaked Online to Download: Tamilrockers पर लीक हो गई WAR, एचडी प्रिंट डाउनलोड करके देख रहे हैं लोग!

WAR Full Movie Leaked Online to Download: Tamilrockers पर लीक हो गई WAR, एचडी प्रिंट डाउनलोड करके देख रहे हैं लोग!


Tamilrockers पर लीक हुई ‘छिछोरे’, देखने के साथ फ्री में डाउनलोड कर रहे लोग

Tamilrockers पर लीक हुई ‘छिछोरे’, देखने के साथ फ्री में डाउनलोड कर रहे लोग


Sapna Choudhary Songs: सपना चौधरी के ये गाने किसी को भी थिरकने पर मजबूर कर दें!

Sapna Choudhary Songs: सपना चौधरी के ये गाने किसी को भी थिरकने पर मजबूर कर दें!


जानिए कैसे डाउनलोड करें YouTube वीडियो, ये है आसान तरीका

जानिए कैसे डाउनलोड करें YouTube वीडियो, ये है आसान तरीका


प्रधानमंत्री आवास योजना से पूरा होगा ख़ुद के घर का सपना, जानिए इससे जुड़ी अहम बातें

प्रधानमंत्री आवास योजना से पूरा होगा ख़ुद के घर का सपना, जानिए इससे जुड़ी अहम बातें


Advertisement

ज़्यादा खोजी गई

टॉप पोस्ट

और पढ़ें Culture

नेट पर पॉप्युलर