ದೇವದಾಸಿ ಸಂಪ್ರದಾಯ: ಆಗ ಮತ್ತು ಈಗ

Updated on 24 Apr, 2017 at 2:32 pm

Advertisement

‘ದೇವದಾಸಿ ಸಂಪ್ರದಾಯ’ಭಾರತದಲ್ಲಿ ಬೇರೂರಿಬಿಟ್ಟಿದೆ. ಅದನ್ನು ಪ್ರತಿಬಂಧಿಸಿದರೂ, ಅದು ಬೇರೆ ಬೇರೆ ರೂಪದಲ್ಲಿ ಇನ್ನೂ ಚಾಲ್ತಿಯಲ್ಲಿದೆ.

೧. ‘ದೇವದಾಸಿ’ ಅಂದರೆ ದೇವರ ಸೇವಕಿ ಅಂತಾ ಅರ್ಥ.  ಹಿಂದಿನ ಕಾಲದಲ್ಲಿ ಈ ಸಂಪ್ರದಾಯ ಆಚರಣೆಯಲ್ಲಿತ್ತು. ದೇವದಾಸಿಯರಿಗೆ ‘ಜೋಗತಿ’ ಅಂತಾನೂ ಕರೆಯುತ್ತಿದ್ದರು.

೨. ಬೌದ್ಧ ಧರ್ಮದ ಅವನತಿಯೊಂದಿಗೆ ದೇವದಾಸಿ ಪದ್ಧತಿ ಶುರುವಾಯ್ತು ಅಂತಾ ಅಂದಾಜಿಸಲಾಗುತ್ತದೆ. ಒಂದು ವಾದದ ಪ್ರಕಾರ ದೇವದಾಸಿಯರೆಲ್ಲ ಮೊದಲು ಬೌದ್ಧ ಸನ್ಯಾಸಿನಿಗಳಾಗಿದ್ದರು. ಅವರ ಮಂದಿರಗಳನ್ನು ಆಕ್ರಮಿಸಿಕೊಂಡ ಮೇಲೆ ಅವರನ್ನು ವೇಶ್ಯೆಯರಂತೆ ನಡೆಸಿಕೊಳ್ಳಲಾಯಿತಂತೆ.

೩. ಈ ಪದ್ಧತಿಯನ್ನು ಪೂಜಾರಿಗಳು ಹುಟ್ಟು ಹಾಕಿದರಂತೆ. ಹೀಗೆ ಮಾಡುವುದರಿಂದ ಧರ್ಮದ  ಆಧಾರದ ಮೇಲಿನ ವೇಶ್ಯಾವಾಟಿಕೆ ಶುರುವಾಯಿತು

೪. ಮೊದಲೆಲ್ಲ, ಕೆಳಜಾತಿಯ ಹೆಣ್ಣು ಮಕ್ಕಳನ್ನು ಮಾರಲಾಗುತ್ತಿತ್ತು. ಈ ಪದ್ಧತಿ ಜಾರಿಗೆ ಬಂದ ಮೇಲೆ ಅಂಥವರೆಲ್ಲ ವೇಶ್ಯೆಯರಾಗಿ ಜೀವನ ನಡೆಸಲು ಶುರು ಮಾಡಿದರು


Advertisement

೫. ಪುರುಷ ಜನನಾಂಗದ ಪೂಜಾ ಪ್ರಕ್ರಿಯೆ ಈ ಸಂಪ್ರದಾಯದ ಒಂದು ಭಾಗ. ಆದರೆ, ಮಾನವನ ತ್ಯಾಗಕ್ಕೆ ಇದೂ ಒಂದು ಮಾರ್ಗ ಅಂತಾ ಹೇಳಲಾಗುತ್ತದೆ.

೬. ಎರಡನೆಯ ರಾಜಾ ರಾಯನ ಕಾಲದ ಶಾಸನದಲ್ಲಿ  ಇಂಥವರನ್ನು ಕುಣಿಯುವ ಹುಡುಗಿಯರು ಅಂತಾ ಕರೆಯಲಾಗಿದೆ

೭. ಕೆಳ ವರ್ಗದ ಮಹಿಳೆಯರೊಂದಿಗೆ ಲೈಗಿಕ ಕ್ರಿಯೆಯಲ್ಲಿ ತೊಡಗುವುದಷ್ಟೇ ಅಲ್ಲದೆ, ತಮಗೆ ಮನಸ್ಸಿಗೆ ಬಂದಂತೆ ಅವರನ್ನು ಭೋಗಿಸಲು ಈ ಆಚರಣೆಯನ್ನು ಬಳಸಿಕೊಳ್ಳಲಾಗುತ್ತಿತ್ತು.

೮. ಮೊದಲೆಲ್ಲ, ದೇವದಾಸಿಯರನ್ನು ಒಳ್ಳೆಯ ಮನೆಗಳಲ್ಲಿ ಇತ್ತು, ಅವರಿಗೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಲಾಗುತ್ತಿತ್ತು. ಆದರೆ, ಈಗಿನ ಬದಲಾದ ಪರಿಸ್ಥಿತಿಯಲ್ಲಿ ಅವರ ಬಾಳು ತುಂಬಾ ಶೋಚನೀಯವಾಗಿದೆ.೯. ಭಾರತದ ಕೆಲವು ಪ್ರದೇಶಗಳಲ್ಲಿ (ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ) ಈ ಪದ್ಧತಿ ಇನ್ನೂ ಜೀವಂತವಾಗಿದೆ.

೧೦. ಇನ್ನೂ ಮುಟ್ಟು ಶುವಾಗದ ಹುಡುಗಿಯರನ್ನು ದೇವರೊಂದಿಗೆ ಮದುವೆ ಮಾಡಿಸಲಾಗುತ್ತದೆ. ಅವರು ಮುಟ್ಟಾಗಲು ಶುರು ಮಾಡಿದ ಮೇಲೆ ಅವರನ್ನು ಹರಾಜಿನಲ್ಲಿ ಮಾರಲಾಗುತ್ತದೆ.

೧೧. ಒಮ್ಮೆ ದೇವರನ್ನು ಮದುವೆಯಾದ ಮೇಲೆ, ಬೇರೆ ಯಾವುದೇ ವ್ಯಕ್ತಿ ಆಕೆಯನ್ನು ಮದುವೆಯಾಗುವಂತಿಲ್ಲ. ಆಕೆಯ ಸಂಪೂರ್ಣ ಬಾಳು ಸೇವೆಗೆ ಮೀಸಲು

೧೨. ಅಕಸ್ಮಾತ್ತಾಗಿ ಹುಡುಗಿ ಗರ್ಭಿಣಿಯಾದರೆ, ಆಕೆಯನ್ನು ಕೆಂಪು ದೀಪದ ಪ್ರದೇಶಕ್ಕೆ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಅಲ್ಲದೆ, ವಯಸ್ಸಾದವರಿಗಿಂತ ಹೆಚ್ಚು ಯೌವ್ವನದಲ್ಲಿರುವವರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ.

೧೩. ವಯಸ್ಸಾದ ಮೇಲೆ ದೇವದಾಸಿಯರು ಜೋಗತಿಯರಾಗಿ, ದೇವರು ಮತ್ತು ಮನುಷ್ಯನ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ.

೧೪. ಈ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಈಗಲೂ ಅಲ್ಲಲ್ಲಿ ಈ ಪದ್ಧತಿ ಜೀವಂತವಾಗಿದೆ. ಪೂಜಾರಿಗಳನ್ನು ಮೆನೆಗೆ ಕರೆಸಿ, ಪೂಜೆ ಮಾಡಿಸಲಾಗುತ್ತದೆ

೧೫. ಯಲ್ಲಮ್ಮ ದೇವಿಯನ್ನು ಪೂಜಿಸಲಾಗುತ್ತದೆ. ನಾಲ್ಕು ವರ್ಷದ ಹುಡುಗಿಯರಿಂದ ಹಿಡಿದು ಎಲ್ಲ ವಯಸ್ಸಿನ ಮಹಿಳೆಯರೂ ಇವಳನ್ನು ಪೂಜಿಸುತ್ತಾರೆ. ಈಕೆಗೆ ಜೋಗಮ್ಮ, ಹೊಳೆಯಮ್ಮ, ರೇಣುಕಾ ಅಂತಾನೂ ಕರೆಯಲಾಗುತ್ತದೆ.

೧೬. ಯಲ್ಲಮ್ಮನ ಭಕ್ತರು ವಿವಸ್ತ್ರರಾಗಿ ಆಕೆಯ ದರ್ಶನ ಮಾಡುತ್ತಾರೆ. ಕೇವಲ ಬೇವಿನ ಎಲೆಗಳನ್ನು ಮಾತ್ರ ದೇಹದ ಮೇಲೆ ಹಾಕಿಕೊಂಡು ಬೆತ್ತಲೆ ಸೇವೆ ಸಲ್ಲಿಸುತ್ತಾರೆ.

೧೭. ಯಲ್ಲಮ್ಮನ ಭಕ್ತರು ದೇವದಾಸಿ ಪದ್ಧತಿಯ ಮೇಲೆ ನಿಷೇಧ ಹೇರದಂತೆ ಪ್ರತಿಭಟಿಸಿದ್ದರು. ಈ ಆಚರಣೆ ವೇಶ್ಯಾವಾಟಿಕೆ ಆಗಿರದೆ ಸಮಾಜ ಸೇವೆ  ಎಂಬುದು ಅವರ ವಾದವಾಗಿತ್ತು.


Advertisement

आपके विचार


  • Advertisement