ದಿವ್ಯಾ ಭಾರತಿ ಸಾವಿನ ಬಗ್ಗೆ ಗೊತ್ತಿರದ ಸಂಗತಿಗಳು

5:40 pm 3 Apr, 2017

Advertisement

೯೦ ರ ದಶಕದಲ್ಲಿ ಬಾಲಿವುಡ್ ಸಾಕಷ್ಟು ಬದಲಾವಣೆಗಳನ್ನು ಕಂಡಿತ್ತು. ಆ ಸಮಯದಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬಂದವು. ಅವುಗಳಲ್ಲಿ ಪ್ರತಿಭಾವಂತೆ ದಿವಾ ಭಾರತಿ ಕೂಡ ಒಬ್ಬಳು. ‘ಸಾತ್ ಸಮುಂದರ್’ ಗೆ ಅವಳು ಮಾಡಿದ ಡಾನ್ಸ್ ಅನ್ನು ಯಾರು ತಾನೇ ಮರೆಯಲು ಸಾಧ್ಯ?

ತಮ್ಮ ಕೆರಿಯರ್ ಅನ್ನು ತುಂಬಾ ಚಿಕ್ಕ ವಯಸ್ಸಿನಲ್ಲೇ ಉತ್ತುಂಗಕ್ಕೆ ತೆಗೆದುಕೊಂಡ ಹೋದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ದಿವ್ಯಾ ಭಾರತಿ  ಕೂಡ ಒಬ್ಬಳು. ಆಕೆ ಮೊತ್ತ ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದು ೧೯೯೦ ರಲ್ಲಿ. ‘ಬೊಬ್ಬಿಲಿ ರಾಜಾ’ ಅನ್ನುವ ತೆಲುಗು ಸಿನೆಮಾದಲ್ಲಿ ಆಕೆ ನಟಿಸಿದ್ದಳು. ಆಮೇಲೆ ಬಂದ ಆಕೆಯ ಸಿನಿಮಾ ಗಳಾದ ಶೋಲಾ ಔರ್ ಶಬನಂ, ವಿಶ್ವಾತ್ಮಾ, ದಿಲ್ ಆಶ್ನಾ ಹೈ ಮತ್ತು ದೀವಾನಾ  ದೊಡ್ಡ ಮಟ್ಟಿಗೆ ಆಕೆಗೆ ಹೆಸರು ತಂದುಕೊಟ್ಟವು. ಆದರೆ, ಆಕೆಯ ಸಂಶಯಾಸ್ಪದವಾದ ಹಠಾತ್ ಮರಣ ಆಕೆಯ ಜನಪ್ರಿಯತೆಗೆ ಬ್ರೇಕ್ ಹಾಕಿತು.  ಆಗ ಆಕೆಗೆ ೧೯ ವರ್ಷ ವಯಸ್ಸಾಗಿತ್ತು.

೬. ದಿವ್ಯಾ ಭಾರತಿ ಸಾವು: ಆತ್ಮಹತ್ಯೆ ಅಥವಾ ಹತ್ಯೆ?

೧೯೯೩ ರ ಏಪ್ರಿಲ್ ೫ ರಂದು ಆಕೆ ಕೊನೆಯುಸಿರೆಳೆದದ್ದು. ಮುಂಬೈ ನ ವರ್ಸೋವಾ ದಲ್ಲಿರುವ ತುಳಸಿ ಅಪಾರ್ಟ್ಮೆಂಟ್ ನ ಐದನೆಯ ಅಂತಸ್ತಿನಿಂದ ಬಿದ್ದು ಸತ್ತಳೆಂದು ಹೇಳಲಾಗುತ್ತದೆ. ಬಹುತೇಕ ಜನ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಿರಬಹುದು ಅಂತಾ ಭಾವಿಸುತ್ತಾರೆ. ಕೆಲವರು ಆಕೆಯ ಸಾವಿನ ಹಿಂದೆ ಷಡ್ಯಂತ್ರ ಇದೆ ಅಂತಾ ನಂಬುತ್ತಾರೆ. ಮುಂಬೈ ಪೊಲೀಸರಿಗೆ ಆಕೆಯ ಸಾವಿನ ಬಗ್ಗೆ ಯಾವುದೇ ಪ್ರಮುಖ ಸಾಕ್ಷಿಗಳು ದೊರೆಯದ ಕಾರಣ ಅವರು ಕೇಸ್ ಅನ್ನು ೧೯೯೮ ರಲ್ಲಿ ಮುಚ್ಚಿದರು.

೫. ಆಕೆಯ ಸಾವಿನ ಹಿಂದಿರುವ ಷಡ್ಯಂತ್ರದ ಕತೆಗಳು

ಆಕೆಯ ಸಾವು ಸಾವಿರಾರು ಜನರಿಗೆ ಅತೀವ ನೋವನ್ನು ಉಂಟು ಮಾಡಿತು. ಎಷ್ಟೋ ಜನರಿಗೆ ಆಘಾತವಾದರೆ, ಕೆಲವರು ಆಕೆಯ ಸಾವಿನ ಸುತ್ತ ಕತೆ ಹೆಣೆಯಲು ಶುರು ಮಾಡಿದರು. ಇಂಥದ್ದೇ ಒಂದು ಕತೆ ಪ್ರಕಾರ ಆಕೆಯ ಸಾವಿಗೆ ಆಕೆಯ ಗಂಡನಾದ ಸಾಜಿದ್ ನಡಿಯಡವಾಲಾ ಕಾರಣ ಅಂತಾ ಹೇಳಲಾಗುತ್ತದೆ. ಇನ್ನೊಂದು ಕತೆಯ ಪ್ರಕಾರ ಭೂಗತ ಜಗತ್ತಿನ ಜೊತೆಗಿನ ಸಾಜಿದ್ ನ ಸಂಬಂಧ ಮತ್ತು ದಿವ್ಯಾ ಳ ತಾಯಿಯ ಜೊತೆಗಿನ ದಿವ್ಯಾಳ ಹಳಸಿದ ಸಂಬಂಧ ಈಕೆಯ ಆತ್ಮಹತ್ಯೆಗೆ ಕಾರಣವಂತೆ.  ಆದರೆ, ಸರಿಯಾದ ಕಾರಣ ಮಾತ್ರ ಇನ್ನೂ ಗೊತ್ತಿಲ್ಲ. 


Advertisement

೪. ಕರಾಳ ರಾತ್ರಿ

ದಿನಾಂಕ: ಏಪ್ರಿಲ್ ೫, ೧೯೯೩, ಸ್ಥಳ: ೫ ನೆಯ ಮಹಡಿ, ತುಳಸಿ ಅಪಾರ್ಟ್ಮೆಂಟ್,  ವರ್ಸೋವಾ, ಅಂಧೇರಿ, ಮುಂಬೈ , ವೇಳೆ: ರಾತ್ರಿ ೧೧

೩. ದಿವ್ಯಾಳ ಸಾವಿನ ಮುಂಚಿನ ಸಮಯ

ನೀತಾ, ತನ್ನ ಗಂಡನ ಜೊತೆಗೆ ರಾತ್ರಿ ೧೦ ಗಂಟೆಯ ಸಮಯಕ್ಕೆ ದಿವ್ಯಾಳ ಮನೆಗೆ ಬರುತ್ತಾಳೆ. ಮೂರೂ ಜನ ಸೇರಿಕೊಂಡು ಹಾಲ್ ನಲ್ಲಿ ಕುಳಿತು ಆಲ್ಕೋಹಾಲ್ ಸೇವಿಸುತ್ತಾರೆ. ಮನೆ ಕೆಲಸದವಳು ಸಹ ಅವರ ಜೊತೆ ರೂಮಿನಲ್ಲಿ ಇರುತ್ತಾಳೆ. ದಿವ್ಯಾಳ ಜೊತೆ ಆಕೆ ಯಾವಾಗಲೂ ಮಾತನಾಡುತ್ತಾ ಇರುತ್ತಾಳೆ. ಅಮೃತಾ, ಅಡುಗೆ ಮನೆಗೆ ಹೋದಾಗ ತನ್ನ ಕೆಲಸದವಳ ಜೊತೆ ಜೋರಾಗಿ ಮಾತನಾಡುತ್ತಾ, ದಿವ್ಯಾ ಕಿಟಕಿಯ ಕಡೆಗೆ ಹೋಗುತ್ತಾಳೆ. ನೀತಾ ತನ್ನ ಗಂಡನ ಜೊತೆ ಟಿವಿ ನೋಡುತ್ತಿದ್ದರಿಂದ ಅವರಿಬ್ಬರೂ ಮಾತುಕತೆಯಲ್ಲಿ ಭಾಗವಹಿಸಿರುವುದಿಲ್ಲ.೨. ದಿವ್ಯಾ ಭಾರತೀಯ ಕೊನೆಯ ಕ್ಷಣಗಳು

ದಿವ್ಯಾಳ ಲಿವಿಂಗ್ ರೂಮ್ ನಲ್ಲಿ ಯಾವುದೇ ಬಾಲ್ಕನಿ ಇರಲಿಲ್ಲ, ಬದಲಾಗಿ ತೆರೆದ ಕಿಟಕಿ ಇತ್ತು. ಆ ಕಟ್ಟಡದ ಬೇರೆ ಎಲ್ಲಾ  ಕಿಟಕಿಗಳಿಗೆ ಗ್ರಿಲ್ ಇದ್ದಾರೆ, ಇದೊಂದು ಕಿಟಕಿಯಲ್ಲಿ ಮಾತ್ರ ಗ್ರಿಲ್ ಇರಲಿಲ್ಲ. ಕಿಟಕಿ ಕೆಳಗೆ ಪಾರ್ಕಿಂಗ್ ಲಾಟ್ ಇದ್ದರೂ ಸಹ, ಅವತ್ತಿನ ದಿನ ಅಲ್ಲಿ ಯಾವುದೇ ಕಾರ್ ಪಾರ್ಕ್ ಆಗಿರಲಿಲ್ಲ.

೧. ದಿವ್ಯಾಳ ಕೊನೆಯ ಉಸಿರು

ಬಿದ್ದ ಮೇಲೆ, ಅವಳು ತನ್ನದೇ ರಕ್ತದ ಮಡುವಿನಲ್ಲಿ ಸಿಕ್ಕಳು. ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಜೀವಂತವಾಗಿದ್ದರೂ, ಮುಟ್ಟುವಷ್ಟರಲ್ಲಿ ಅವಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇವತ್ತು ಆಕೆ ನಮ್ಮ ಜೊತೆ ಇಲ್ಲದಿದ್ದರೂ ಆಕೆಯ ಪ್ರತಿಭೆ ಮಾತ್ರ ಜನರ ಮನಸ್ಸಿನಿಂದ ಮರೆಯಾಗಿಲ್ಲ.

ಇದನ್ನೂ ಓದಿ : ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ಬಾಲಿವುಡ್ ತಾರೆಗಳು ; ದಿವ್ಯಾಳನ್ನು ದಂತಕತೆಯನ್ನಾಗಿಸಿದ ೭ ಗೀತೆಗಳು


Advertisement

आपके विचार


  • Advertisement