ಹುಡುಗಿಯರಿಗೆ ಟೆಕ್ಸ್ಟ್ ಮೆಸೇಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

Updated on 24 Apr, 2017 at 2:34 pm

Advertisement

ನಿಮ್ಮ ಹುಡುಗಿಯನ್ನು ಕಳೆದುಕೊಳ್ಳುವ ತುಂಬಾ ಸುಲಭವಾದ ವಿಧಾನ ಎಂದರೆ ನಿಮ್ಮ ಹುಡುಗಿಗೆ ಸರಿಯಾಗಿ ಟೆಕ್ಸ್ಟ್ ಮೆಸೇಜ್ ಕಳುಹಿಸದೆ ಇರುವುದು. ಈಗಂತೂ ಮೆಸೇಜ್ ಆಪ್ ಗಳು ಲಭ್ಯವಿವೆ. ಫ್ಲರ್ಟ್ ಮಾಡುವುದು ಹೇಗೆ ಒಂದು ಕಲೆಯೋ, ಅದೇ ರೀತಿ ಮೆಸೇಜ್ ಮಾಡುವುದೂ ಸಹ ಒಂದು ಕಲೆಯಾಗಿ ರೂಪುಗೊಂಡಿದೆ. ಸಾಮಾನ್ಯವಾಗಿ ಟೆಕ್ಸ್ಟ್ ಕಳಿಸಿ, ಅದರ ಉತ್ತರಕ್ಕೆ ಕಾಯುತ್ತಾ ಕುಳಿತುಕೊಳ್ಳುತ್ತೇವೆ. ನೀವು ಇಂಥವರಲ್ಲಿ ಒಬ್ಬರಾಗಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ.

೧. ಅವಳಿಗೆ ಹೆಚ್ಚು ಮತ್ತು ತುಂಬಾ ಉದ್ದವಾದ ಮೆಸೇಜ್ ಗಳನ್ನು ಕಳುಹಿಸಬೇಡಿ

ನೀವು ಹೆಚ್ಚೆಚ್ಚು ಮತ್ತು ತುಂಬಾ ಉದ್ದನೆಯ ಮೆಸೇಜ್ ಗಳನ್ನು ಕಳುಹಿಸುವುದರಿಂದ ಅವಳಿಗೆ ಬೋರ್ ಹೊಡೆಸುತ್ತೀರಿ. ನಿಮ್ಮ ಸಂಬಂಧ ಒಂದು ಸ್ಟೆಪ್ ಮುಂದೆ ಹೋದ ಮೇಲೆ ಪದ್ಯ, ಕವಿತೆಗಳನ್ನು ಕಳುಹಿಸಿ.

gurl


Advertisement

 

೨. ಸುಮ್ಮ ಸುಮ್ಮನೆ ಚಾಟಿಂಗ್ ಅನ್ನು ಎಳೀಬೇಡಿ 

ಹುಡುಗಿ ಜೊತೆ ಹೆಚ್ಚು ಸಮಯ ಕಳೀಬೇಕು ಅನ್ನೋ ಇಚ್ಛೆ ಇದ್ದರೆ, ಆಕೆ ಜೊತೆ ಮಾತನಾಡಿ. ಅದನ್ನು ಬಿಟ್ಟು ಹೆಚ್ಚು ಸಮಯ ಟೆಕ್ಸ್ಟ್ ಮಾಡುವಂತೆ ಆಕೆಯನ್ನು ಪೀಡಿಸಬೇಡಿ. ಇದರಿಂದ ನೀವು ತುಂಬಾ ಡೆಸ್ಪರೇಟ್ ಅಂತಾ ಅವಳಿಗೆ ಅನ್ನಿಸುತ್ತದೆ.

 

೩. ಮೂರ್ಖನಂತೆ ಪದೇ ಪದೇ ಪ್ರಶ್ನೆ ಕೇಳಬೇಡಿ 

ಅವಶ್ಯ ಇದ್ದಾಗ ಮಾತ್ರ ವಿವೇಚನೆಯುಕ್ತ ಪ್ರಶ್ನೆಗಳನ್ನು ಕೇಳಿ. ಯಾವಾಗಲೂ ಅವಳನ್ನು ಪ್ರಶ್ನೆ ಕೇಳುವುದು ಮೇಲ್ನೋಟಕ್ಕೆ ಒಳ್ಳೆಯದು ಅಂತಾ ಅನ್ನಿಸಿದರೂ ಅವಳಿಗೆ ಮಾತ್ರ ಇದು ತುಂಬಾ ಕಿರಿ ಕಿರಿ ಉಂಟು ಮಾಡುತ್ತದೆ. ಆಕೆ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಕುಳಿತುಕೊಂಡು ಬಿಟ್ಟಾಳು.

 

೪. ಉತ್ತರ ನಿರೀಕ್ಷೆ ಇಟ್ಟುಕೊಂಡು ಮೆಸೇಜ್ ಮಾಡಬೇಡಿ 

ಹುಡುಗಿಯನ್ನು ಭೇಟಿ ಮಾಡುತ್ತೀರಿ , ಸ್ವಲ್ಪ ಹೊತ್ತು  ಮಾತನಾಡುತ್ತೀರಿ, ಒಬ್ಬರ ಕಂಪನಿ ಇನ್ನೊಬ್ಬರಿಗೆ ಒಳ್ಳೆಯದನ್ನಿಸುತ್ತದೆ, ಫೋನ್ ನಂಬರ್ ಬದಲಾಯಿಸಿಕೊಳ್ಳುತ್ತೀರಿ. ಇದಾದ ಮೇಲೆ ಆಮೇಲೆ ಅವಳಿಗೆ ನೀವು ಒಂದು ಟೆಕ್ಸ್ಟ್ ಮೆಸೇಜ್ ಕಳುಹಿಸಿದ್ದರೆ ಅದರಲ್ಲೇನೂ ತಪ್ಪಿಲ್ಲ. ಆದರೆ, ಆಕೆ ಅದಕ್ಕೆ ಪ್ರತಿಕ್ರಿಯೆ ನೀಡುವ ಬದಲು ಮತ್ತೊಮ್ಮೆ ಮೆಸೇಜ್ ಮಾಡಬೇಡಿ.

 

೫. ಹುಡುಗಿಯನ್ನು ಹೊರಗೆ ಕರೆದುಕೊಂಡು ಹೋಗುವ ಇರಾದೆ ಇದ್ದರೆ ತುಂಬಾ ಕಾಯಬೇಡಿ

ನೀವಿಬ್ಬರೂ ಚೆನ್ನಾಗಿ ಮಾತನಾಡಲು ಶುರು ಮಾಡಿದ್ದರೆ ಅವಳನ್ನು ಹೊರಗಡೆ ಕರೆದುಕೊಂಡು ಹೋಗಲು ಹೆಚ್ಚು ಕಾಯಬೇಡಿ. ಕೇಳಿ ನೋಡಿ. ನೀವು ಕೇಳದಿದ್ದರೆ, ನೀವು ಈ ಸಂಬಂಧದ ಬಗ್ಗೆ ಹೆಚ್ಚು ಸೀರಿಯಸ್ ಇಲ್ಲ ಅಂತಾ ಅವಳು ಭಾವಿಸಬಹುದು. ಅಲ್ಲದೆ, ನಿಮ್ಮ ಮೆಸೇಜ್ ಗಳಿಗೆ ಆಕೆ ಉತ್ತರಿಸುವುದನ್ನು ನಿಲ್ಲಿಸಲೂ ಬಹುದು.

 

೬. ಇಲ್ಲ ಸಲ್ಲದ ಊಹೆಗಳನ್ನು ಮಾಡಬೇಡಿ 

ಅವಳು ನಿಮಗೆ ಉತ್ತರಿಸದೆ  ಹೋದರೆ,ಏನೇನೋ ಊಹೆಗಳನ್ನು ಮಾಡಲು ಹೋಗಬೇಡಿ. ಆಕೆ ಬೇರೆ ಕೆಲಸದಲ್ಲಿ, ತನ್ನ ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಬ್ಯುಸಿ ಆಗಿರಬಹುದು. ಆದರೆ, ಆಕೆ ಉತ್ತರ ನೀಡದಿರುವುದು ಸಾಮಾನ್ಯವಾದರೆ, ನೀವು ಎಚ್ಚರಿಕೆ ವಹಿಸಬೇಕು. 

೭. ತುಂಬಾ ಗಂಭೀರವಾದ ವಿಷಯಗಳನ್ನು ಟೆಕ್ಸ್ಟ್ ಮಾಡಬೇಡಿ 

ಗಂಭೀರ ವಿಷಯಗಳನ್ನು ಚರ್ಚಿಸುವುದಕ್ಕೆ ಚಾಟಿಂಗ್ ಒಳ್ಳೆಯ ವೇದಿಕೆಯಲ್ಲ ಎಂಬುದು ನಿಮಗೆ ತಿಳಿದಿರಲಿ. ಟೆಕ್ಸ್ಟ್ ಮಾಡುವಾಗ ಮೆಸೇಜ್ ಗಳನ್ನು ಚಿಕ್ಕದಾಗಿಯೂ, ಸ್ವಲ್ಪ ಹಾಸ್ಯಮಯವಾಗಿಯೂ ಇಡಿ.

 

೮. ಏನೇ ಉದ್ದೇಶವಿರದೆ ಟೆಕ್ಸ್ಟ್ ಮಾಡಲು ಹೋಗಬೇಡಿ

ಕೆಲವೊಂದು ಸಲ ಗೊತ್ತು ಗುರಿ ಇಲ್ಲದೆ ಟೆಕ್ಸ್ಟ್ ಮಾಡುತ್ತಾ ಕೂಡುತ್ತೇವೆ. ಆ ತರಹದ ತಪ್ಪನ್ನು ಮಾಡಬೇಡಿ. ಸೀದಾ ಮಾತನಾಡಬೇಕಾದ ವಿಷಯಕ್ಕೆ ಬನ್ನಿ. ಸುಖಾ ಸುಮ್ಮನೆ ಕಾಲಹರಣ ಮಾಡಬೇಡಿ.

 

೯. ಬೇರೆ ಹುಡುಗರಲ್ಲಿ  ನೀವೂ ಒಬ್ಬರಾಗಬೇಡಿ   

ನೀವು ತೀರಾ ವಿಭಿನ್ನರಾಗಿರದೆ ಇರಬಹುದು. ಆದರೆ, ಇತರರಂತೆಯೇ ನೀವೂ ಇರದೇ ನಿಮ್ಮತನವನ್ನು ಉಳಿಸಿಕೊಳ್ಳಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಅಕ್ಷರಗಳ ಮೂಲಕ ಹೇಗೆ ಹೇಳುವುದು ಅನ್ನುವುದನ್ನು ಕಲಿತುಕೊಳ್ಳಿ.

 

೧೦. ಮೆಸೇಜ್ ಗಳಲ್ಲಿ  ತಿಳಿಹಾಸ್ಯವಿರಲಿ 

ಸ್ವಲ್ಪ ಮಟ್ಟಿಗಿನ ಹಾಸ್ಯವನ್ನು ನಿಮ್ಮ ಟೆಕ್ಸ್ಟ್ ಮೆಸೇಜ್ ಗಳಲ್ಲಿ ಬೆರೆಸಿ.

 

 


Advertisement

आपके विचार


  • Advertisement