ಕ್ರೆಡಿಟ್ ಕಾರ್ಡ್ ಇದ್ದಲ್ಲಿ (ಅಥವಾ ಬೇಕಾದಲ್ಲಿ) ಇವುಗಳ ಬಗ್ಗೆ ಗಮನ ನೀಡಿ

Updated on 24 Apr, 2017 at 2:56 pm

Advertisement

೧. ನಿಮ್ಮ ‘ಕ್ರೆಡಿಟ್ ಸ್ಕೋರ್’ ತುಂಬಾ ಮಹತ್ವವಾದದ್ದು

ಸದ್ಯಕ್ಕೆ CIBIL (ಕ್ರೆಡಿಟ್ ಇನ್ಫಾರ್ಮಶನ್ ಬ್ಯುರೋ ಆಫ್ ಇಂಡಿಯಾ) ದಿಂದ ಪೂರೈಸಲ್ಪಡುವ ‘ಕ್ರೆಡಿಟ್ ಸ್ಕೋರ್’ ಆಧಾರದ ಮೇಲೆ ನಿಮಗೆ ಲೋನ್ ಸಿಗುವ ಸಾಧ್ಯತೆ ಪತ್ತೆ ಹಚ್ಚಬಹುದು. ೩೦೦-೯೦೦ ವರೆಗಿನ ಈ ಸ್ಕೋರ್, ಹೆಚ್ಚಿದ್ದಷ್ಟೂ ಉತ್ತಮ.

೨. ಕ್ರೆಡಿಟ್ ಕಾರ್ಡ್ ಬೇಕೆಂದರೆ ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ನೀವೇ ಭರ್ತಿ ಮಾಡಿ

ಸೇಲ್ಸ್ ಮನ್ ಗಳು ನಿಮ್ಮ ಹೆಸರು ಮತ್ತೆ ಕಳವು ವಿವರಗಳನ್ನು ಮಾತ್ರ ಹಾಕಿ, ಅರ್ಜಿಯ ಮೇಲೆ ನಿಮ್ಮ ಸಹಿ ತೆಗೆದುಕೊಳ್ಳುತ್ತಾರೆ. ಆದರೆ, ಹಾಗಾಗಲು ಬಿಡಬೇಡಿ, ಅರ್ಜಿಯನ್ನು ಸಂಪೂರ್ಣವಾಗಿ ನೀವೇ ತುಂಬಿ.

೩. ನೀವು ಕೊಂಡ ವಸ್ತುಗಳ ಮೇಲೆ ಕ್ರೆಡಿಟ್ ಕಾರ್ಡ್ ಕಂಪನಿ ಎಷ್ಟು ಬಡ್ಡಿಯನ್ನು ವಿಧಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಿ

ಸಾಮಾನ್ಯವಾಗಿ ೦% ಬಡ್ಡಿ ಇರುತ್ತದೆ ಆದರೂ, ಕಾಲಕ್ಕೆ ತಕ್ಕಂತೆ ಅದು ಬದಲಾಗುವ ಸಾಧ್ಯತೆಯೂ ಇದೆ.

೪. ಸರಿಯಾದ ಸಮಯಕ್ಕೆ ಬಿಲ್ ತುಂಬದಿದ್ದರೆ ಅದಕ್ಕಾಗಿ ವಿಧಿಸುವ ದಂಡದ ಪ್ರಮಾಣವನ್ನು ತಿಳಿದುಕೊಳ್ಳಿ

ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ತುಂಬಿ. ಹಾಗೆ ಮಾಡದಿದ್ದಲ್ಲಿ ಅದಕ್ಕೆ ವಿಧಿಸುವ ದಂಡ ಎಷ್ಟು ಎಂಬುದನ್ನು ತಿಳಿದುಕೊಳ್ಳಿ

೫. ಬಿಲ್ ನ ಮೊತ್ತಕ್ಕೂ ದಂಡದ ಪ್ರಮಾಣಕ್ಕೂ ಸಂಬಂಧವಿಲ್ಲ

ಬಿಲ್ ಮೊತ್ತ ಕಡಿಮೆ ಇದೆಯೆಂದು ಕಂಪನಿ ನಿಮಗೆ ಕಡಿಮೆ ದಂಡ ವಿಧಿಸುವುದಿಲ್ಲ.

೬. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡದಿದ್ದರೆ ನಿಮ್ಮ ರಿವಾರ್ಡ್ ಪಾಯಿಂಟ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ

ನಿಮ್ಮ ಬಿಲ್ ಗೆ ಅನುಗುಣವಾಗಿ, ಕಂಪನಿ ನಿಮಗೆ ಕೆಲವು ರಿವಾರ್ಡ್ ಪಾಯಿಂಟ್ಗಳನ್ನು ನಿಗದಿ ಮಾಡಿರುತ್ತೆ. ಬಿಲ್ ಸಂದಾಯ ಸರಿಯಾದ ಸಮಯಕ್ಕೆ ಆಗದಿದ್ದರೆ, ಆ ಪಾಯಿಂಟ್ ಗಳ ಮೇಲೆ  ಪ್ರತಿಕೂಲ ಪರಿಣಾಮ ಬೀರುತ್ತದೆ.

೭. ಬಿಲ್ ಪಾವತಿಸುವ ಕೊನೆಯ ದಿನದ ಬಗ್ಗೆ ಯಾವುದೇ ಗೊಂದಲ ಬೇಡ


Advertisement

ಪ್ರತೀ ತಿಂಗಳೂ ಬಿಲ್ ಪಾವತಿಸುವ ಕೊನೆಯ ದಿನ ಒಂದೇ ಆಗಿರುತ್ತದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.

೮. ಸರಿಯಾದ ಸಮಯಕ್ಕೆ ಬಿಲ್ ಪಾವತಿಸದಿದ್ದರೆ, ನಿಮ್ಮನ್ನು ಸುಸ್ತಿದಾರರ ಪಟ್ಟಿಗೆ ಸೇರಿಸಲಾಗುತ್ತದೆ

ಬಿಲ್ ಪಾವತಿಯಲ್ಲಿ ವಿಳಂಬವಾದರೆ, ಕ್ರೆಡಿಟ್ ಬ್ಯುರೋ ನಿಮ್ಮನ್ನು ಸುಸ್ತಿದಾರ ಅಂತಾ ಪರಿಗಣಿಸುತ್ತದೆ. ಇದರಿಂದ ನಿಮಗೆ ಮುಂದೆ ಲೋನ್ ಸಿಗುವ ಸಾಧ್ಯತೆ ಕಡಿಮೆಯಾಗುತ್ತದೆ.

೯. ನೀವು ದುಡ್ಡು ಕಟ್ಟದಿದ್ದರೆ ಆಸ್ತಿಯನ್ನು ಕಳೆದುಕೊಳ್ಳಬಹುದು

ನಿಮ್ಮಿಂದ ಬಾಕಿಯನ್ನು ವಸೂಲು ಮಾಡಲು ಕಂಪನಿ, ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.  ಈ ಪ್ರಕ್ರಿಯೆ ಮೊದಲು ತುಂಬಾ ನಿಧಾನಗತಿಯಲ್ಲಿರುತ್ತಿತ್ತು. ಆದರೆ, ಈಗ ಸಾಕಷ್ಟು ತ್ವರಿತವಾಗಿ ಆಗುತ್ತದೆ.

tampabaycriminaldefenselawyerblog

೧೦. ಸರಿಯಾದ ಸಮಯಕ್ಕೆ ಬಿಲ್ ಪಾವತಿಸದಿದ್ದರೆ, ಬಡ್ಡಿ ರಹಿತ ಸಮಯದ ಲಾಭ ಕಳೆದುಕೊಳ್ಳುತ್ತೀರಿ

ಸುಮಾರು ೪೦-೪೫ ದಿನಗಳ ಬಡ್ಡಿ ರಹಿತ ಸಮಯ ಇರುತ್ತದೆ. ಬಿಲ್ ಸರಿಯಾಗಿ ಪಾವತಿಸದಿದ್ದರೆ, ಈ ಪ್ರಯೋಜನ ನಿಮಗೆ ಸಿಗುವುದಿಲ್ಲ.

೧೧. ಕಾರ್ಡ್ ಉಪಯೋಗಿಸದಿದ್ದರೂ ದುಡ್ಡು ಕೊಡಬೇಕು

ಕೆಲವು ಕಂಪನಿಗಳು, ಅವುಗಳು ಕೊಟ್ಟಿರುವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸದಿದ್ದರೂ ದುಡ್ಡು ಕಟ್ಟಿಸಿಕೊಳ್ಳುತ್ತವೆ

೧೨. ನಿಮ್ಮ ಕೊಳ್ಳುವಿಕೆಯ ಮೇಲೆ ಹಿಡಿತ ಇರಲಿ

ಕ್ರೆಡಿಟ್ ಕಾರ್ಡ್ ಇದೆ ಅಂತ ಬೇಕಾಬಿಟ್ಟಿ ಸಾಮಾನುಗಳನ್ನು ಕೊಂಡು, ಕಾರ್ಡ್ ಉಜ್ಜಬೇಡಿ. ಕೊಳ್ಳುವಿಕೆಯಲ್ಲಿ ಶಿಸ್ತನ್ನು ಪಾಲಿಸಿ

Advertisement

आपके विचार


  • Advertisement