‘ಕಳೆದುಹೋದ ಸಮಯ’ ದ ಬಗೆಗಿನ ಕುತೂಹಲಕರ ಅಂಶಗಳು

2:40 pm 19 Apr, 2017

Advertisement

ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ, ಇವತ್ತಿಗೂ ಕೆಲವು ಪ್ರಶ್ನೆಗಳಿಗೆ ನಮಗಿನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಕೆಲವೊಂದು ವಿಷಯಗಳಲ್ಲಿ ವಿಜ್ಞಾನ ನಮ್ಮನ್ನು ತುಂಬಾ ಮುಂದಕ್ಕೆ ಕರೆದುಕೊಂಡು ಹೋಗಿದೆ. ಆದರೆ, ಇನ್ನು ಕೆಲವೊಂದರಲ್ಲಿ ನಾವು ಹಿಂದಿದ್ದೇವೆ. ಇಂಥದ್ದೇ ಒಂದು ವಿಷಯ ‘ ಕಳೆದುಹೋದ ಸಮಯ’. ಇದು ನೆನಪಿನಲ್ಲಿ ಉಳಿಯದ ಒಂದು ಚಿಕ್ಕ ಅವಧಿ, ಇದನ್ನು ಈಗಲೂ ಸರಿಯಾಗಿ ವಿವರಿಸಲು ಆಗಿಲ್ಲ.

೧. ನಿಮ್ಮ ಜಾಗೃತ ಸ್ಥಿತಿಯಲ್ಲಿನ ನೆನಪಿನಲ್ಲಿನ ಒಂದು ಅವಧಿ ನಿಮ್ಮ ಸ್ಮೃತಿಯಲ್ಲಿ ಇಲ್ಲದಿರುವುದು. ಆ ಸಮಯದಲ್ಲಿ ನೀವು ಎಚ್ಚರವಾಗಿದ್ದಾಗಲೂ ನಿಮಗೆ ಅದರ ಬಗ್ಗೆ ನೆನಪೇ ಇರುವುದಿಲ್ಲ.

೨. ಈ ಅವಧಿ ಕೆಲವು ನಿಮಿಷಗಳಿಂದ ಕೆಲವು ದಿನಗಳ ವರೆಗೂ ಇರಬಹುದು.


Advertisement

೩.  ಸಾಕಷ್ಟು ಸಲ ಜನ ಕೆಲಸ ಮಾಡುತ್ತಿರಬೇಕಾದರೆ (ಉದಾಹರಣೆಗೆ ಗಾಡಿ ಓಡಿಸುವುದು ಅಥವಾ ನಡೆಯುವುದು), ತಂಡಕ್ಕೆ ಬೇಕಾದ ಸಮಯಕ್ಕಿಂತ ಸಾಕಷ್ಟು ಹೆಚ್ಚಿನ ಸಮಯ ತೆಗೆದುಕೊಂಡ ಮೇಲೆಯೇ ಅವರಿಗೆ ಇದರ ಬಗ್ಗೆ ಗೊತ್ತಾಗುತ್ತೆ

೪. ಆಮೇಲೆ ಅವರ ಅರಿವಿಗೆ ಬರುವುದೇನೆಂದರೆ, ನಿಮಿಷಗಳಲ್ಲ ಗಂಟೆಗಳೇ ಕಳೆದಿವೆ. ಆದರೂ ಆ ಸಮಯದಲ್ಲಿ ತಾವು ಏನು ಮಾಡಿದರು ಅನ್ನುವುದು ಮಾತ್ರ ನೆನಪಿಗೆ ಬರ್ತಾ ಇಲ್ಲ ಅನ್ನುವುದು.

೫. ಈ ರೀತಿ ಕಳೆದುಹೋದ ಸಮಯವನ್ನು ಹುಡುಕಲಿಕ್ಕೆ ಸಾಕಷ್ಟು ಜನ ಸಂಮೋಹನದ ಮೊರೆ ಹೋಗುತ್ತಾರಂತೆ.

೬. ಈ ರೀತಿಯ ವಿದ್ಯಮಾನ ಜಗತ್ತಿನ ತುಂಬೆಲ್ಲ, ವಯಸ್ಸಿನ ಭೇದವಿಲ್ಲದೆ ನಡೆಯುತ್ತೆ.

೭. ಮನಃಶಾಸ್ತ್ರದಲ್ಲಿ ಇದಕ್ಕೆ ಸರಿಯಾದ ವಿವರಣೆ ಇಲ್ಲ. ಆದರೆ, ಇದರಿಂದ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಿಲ್ಲ ಅಂತಾ ಅದು ಹೇಳುತ್ತೆ.

೮. ನಿಗದಿತ ಸಮಯಕ್ಕಿಂತಲೂ ಕಡಿಮೆ ಸಮಯ ತೆಗೆದುಕೊಂಡು, ಸಮಯವನ್ನು ಗಳಿಸಿದ ಉದಾಹರಣೆಗಳೂ ಇವೆ.

tumblr೯. ಎಷ್ಟೋ ಜನ ಈ ಕಳೆದುಹೋದ ಸಮಯವನ್ನು ಅನ್ಯಗ್ರಹ ಜೀವಿಗಳೊಂದಿಗೆ ತಾಳೆ ಹಾಕುತ್ತಾರೆ. ಅವುಗಳು ಮಾಡುವ ಪ್ರಯೋಗದಿಂದ ಹೀಗಾಗುತ್ತದೆ ಅಂತಾ ಅವರ ನಂಬಿಕೆ.

೧೦. ದೇಹದಿಂದ ಆತ್ಮವನ್ನು ಹೊರತೆಗೆದು ಅದಕ್ಕೆ ತನ್ನದೇ ಅನುಭವವನ್ನು ಕೊಡುವ ಅತಿಮಾನುಷ ಕ್ರಿಯೆ ಈ ವಿದ್ಯಮಾನವನ್ನು ವಿವರಿಸಬಹುದು ಅಂತಾ ಕೆಲವರ ನಂಬಿಕೆ.

೧೧. ಕೆಲವರಿಗಂತೂ ಈ ವಿದ್ಯಮಾನ ಗುಂಪಿನಲ್ಲಿ ಕಂಡುಬರುತ್ತದೆ. ಹೀಗಾಗಿ, ಇದನ್ನು ಅಲ್ಲಗಳೆಯುವುದು ಅಸಾಧ್ಯ.

೧೨. ಒಂದು ಕ್ಷಣದ ಹಿಂದೆ ತಾವು UFO ಕಂಡಿದ್ದಾಗಿ, ಮರುಕ್ಷಣದಲ್ಲೇ ತಾವು ತಮ್ಮ ಗಾಡಿ ಓಡಿಸುತ್ತಿರುವುದಾಗಿಯೂ ಕೆಲವರು ಹೇಳುತ್ತಾರೆ. ಆದರೆ, ಅವರು ಹೇಳುತ್ತಿರುವುದು ಕ್ಶಣದ ಲೆಕ್ಕದಲ್ಲಿ ಇರದೇ ಗಂಟೆಗಳ ಲೆಕ್ಕದಲ್ಲಿತ್ತು ಅನ್ನುವುದು ಆಮೇಲೆ ಗೊತ್ತಾಗುತ್ತೆ.

೧೩. ಕೆಲವು ಸಂಶೋಧಕರ ಪ್ರಕಾರ ಅನ್ಯಗ್ರಹ ಜೀವಿಗಳು ಮಾನವರ ಜೊತೆ ಸಂಪರ್ಕ ಮಾಡಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಈರೀತಿಯ ಅನುಭವ ಆಗುತ್ತದೆಯಂತೆ.

೧೪. ಸಮ್ಮೋಹನದಿಂದ ನೆನಪುಗಳನ್ನು ಮತ್ತೆ  ರೂಪಿಸಲು ಸಾಧ್ಯ. ಆದರೆ, ಆ ನೆನಪುಗಳನ್ನು ಹುಸಿ ನೆನಪುಗಳು ಅಂತಾ ಪರಿಗಣಿಸಲಾಗುತ್ತದೆಯಂತೆ.

೧೫. ಏನೇ ಇರಲಿ, ಈ ವಿದ್ಯಮಾನವನ್ನು ಜನರು ಜಗತ್ತಿನೆಲ್ಲೆಡೆ ಅನುಭವಿಸುತ್ತಿದ್ದಾರೆ. ಇವುಗಳನ್ನು ವಿವರಿಸುವ ಕೆಲವು ಸೈಟ್ ಗಳ ವಿವರ ಇಲ್ಲಿದೆ.

displaynote


Advertisement

आपके विचार


  • Advertisement