ಈ ಭಾರತೀಯ ಸಂಪ್ರದಾಯಗಳು ನಿಮಗೆ ಗೊತ್ತೆ

2:50 pm 19 Apr, 2017

Advertisement

ಭಾರತದಲ್ಲಿರುವ ಕೆಲವು ಸಂಪ್ರದಾಯಗಳು ನಿಮಗೆ ಅಚ್ಚರಿ ತರಬಲ್ಲವು.

೧. ಕನ್ಯಾದಾನ

ಕನ್ಯಾದಾನದ ನಿಜವಾದ ಅರ್ಥ, ಮಗಳನ್ನು ದಾನಮಾಡುವುದು. ಈ ದಾನದ ಹೆಸರಿನಲ್ಲಿ ವಿಷ್ಣು ರೂಪದಲ್ಲಿರುವ ವರನಿಗೆ ಮಗಳನ್ನು ದಾನ ಮಾಡಲಾಗುತ್ತದೆ.

amazonaws


Advertisement

 

೨. ಪ್ರಾಣಿಗಳ ಬಲಿ

ಭಾರತದಲ್ಲಿ, ದೇವರ ಹೆಸರಿನಲ್ಲಿ ಸಾಕಷ್ಟು ಸಲ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಬಲಿ ಕೊಟ್ಟ ಪ್ರಾಣಿಯ ಮಾಂಸವನ್ನು ಪ್ರಸಾದದ ರೂಪದಲ್ಲಿ ಜನರಿಗೆ ಹಂಚಲಾಗುತ್ತದೆ. ಇದರಿಂದ ಭಗವಂತನ ಕೃಪೆ ಅವರ ಮೇಲಾಗುತ್ತದೆ ಅನ್ನುವ ನಂಬಿಕೆಯಿದೆ.

 

೩. ಅರೇಂಜ್ಡ್ ಮ್ಯಾರೇಜ್

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಅಂತಾ ಹೇಳಲಾಗುತ್ತದೆ. ಆದರೆ, ಭಾರತದಲ್ಲಿ ಮಾತ್ರ ಸಮಾಜದ ಮಧ್ಯೆ ಸಾಕಷ್ಟು ವೈಭವೋಪಿತವಾಗಿ ಅದನ್ನು ನೆರವೇರಿಸಲಾಗುತ್ತದೆ. ಹುಡುಗ ಮತ್ತು ಹುಡುಗಿ ಮುಂದೆ ಒಳ್ಳೆಯ ಜೀವನ ನಡೆಸಬೇಕು ಅಂತಾ ಅಪೇಕ್ಷಿಸಲಾಗುತ್ತದೆ.

 

೪. ವರದಕ್ಷಿಣೆ

ಭಾರತದಲ್ಲಿ, ಹುಡುಗಿ ಮನೆಯವರು ವರನಿಗೆ ವರದಕ್ಷಿಣೆ ಕೊಡುತ್ತಾರೆ. ಸಾಕಷ್ಟು ಪ್ರಮಾಣದ ಉಡುಗೊರೆ, ದುಡ್ಡು , ಚಿನ್ನ-ಬೆಳ್ಳಿಯನ್ನು ವಾರದಕ್ಷಿಣೆಯನ್ನಾಗಿ ಕೊಡಲಾಗುತ್ತದೆ. ತಮ್ಮ ಮಗಳ ಜೀವನ ಚೆನ್ನಾಗಿ ಆಗಲಿ ಅಂತಾ ಮನೆಯವರು ಈ ಸಾಮಾನುಗಳನ್ನು ಕೊಡುತ್ತಾರೆ.

 

೫. ಮಗುವನ್ನು ಎಸೆಯುವುದು

ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಪದ್ಧತಿ ಕಂಡುಬರುತ್ತದೆ. ಸುಮಾರು ೫೦ ಅಡಿ ಎತ್ತರದಿಂದ ೧-೨ ವರ್ಷದ ಮಕ್ಕಳನ್ನು ಕೆಳಕ್ಕೆ ಎಸೆಯುತ್ತಾರೆ. ಕೆಳಗೆ ಇರುವವರು ಮಗುವನ್ನು ಹಿಡಿಯುತ್ತಾರೆ. ಇದರಿಂದ ಮಕ್ಕಳ ಮೇಲೆ ಭಗವಂತನ ದಯೆ ಇರುತ್ತದೆ ಅಂತಾ ನಂಬಿಕೆ.

 

೬. ಸಮೂಹ ಪ್ರಾರ್ಥನೆ

ಇದು ಸಾಮಾನ್ಯವಾಗಿ ಶಿಯಾ ಮುಸ್ಲಿಮರಲ್ಲಿ ಕಂಡುಬರುವ ಸಂಪ್ರದಾಯ. ಹುಸೇನ್ ಅಲಿ ಯ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಲ್ಲಿ ಸಾಕಷ್ಟು ರಕ್ತವೂ ಹರಿಯುತ್ತದೆ. 

೭. ಅಘೋರಿ ಸಂಪ್ರದಾಯ

ಅಘೋರಿಗಳು ಸಾಮಾನ್ಯವಾಗಿ ವಾರಾಣಸಿಯಲ್ಲಿ ಕಾಣಸಿಗುತ್ತಾರೆ. ಅಘೋರಿಗಳ ಸಂಪ್ರದಾಯ ಸ್ವಲ್ಪ ವಿಚಿತ್ರವಾಗಿರುತ್ತದೆ. ಅಘೋರಿಗಳು ಮೈಮೇಲೆಲ್ಲಾ ಬೂದಿ ಹಾಕಿಕೊಂಡು, ಹೆಣಗಳ ಜೊತೆ ಜೀವಿಸುತ್ತಾರೆ ಅಂತಾ ನಂಬಿಕೆ.

 

೮. ಮಾಟ-ಮಂತ್ರ

ಭಾರತದಲ್ಲಿ ಮೂಢನಂಬಿಕೆ ಆಚರಣೆಗೆ ಕಮ್ಮಿ ಇಲ್ಲ. ಜಾದು, ಮಾಟ-ಮಂತ್ರ ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲಾ ಕಡೆ ಕಾಣಸಿಗುತ್ತೆ. ಇದರಿಂದ ಜನರಿಗೆ ತೊಂದರೆಯಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ.

 

೯. ಬೆಂಕಿ ಹಾಯುವುದು

ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಣಸಿಗುವ ಈ ಸಂಪ್ರದಾಯ, ಬೇರೆ ರಾಜ್ಯಗಳಲ್ಲೂ ಅಲ್ಲಲ್ಲಿ ಕಾಣುತ್ತದೆ. ಹಬ್ಬ ಆಚರಣೆಯ ಭಾಗವಾಗಿರುವ ಈ ಸಂಪ್ರದಾಯದಲ್ಲಿ ಕಿಚ್ಚು ಹಾಯುವುದರಿಂದ ದೇವರ ಕೃಪೆ ಆಗುತ್ತದೆ ಅಂತಾ ಜನ ಭಾವಿಸುತ್ತಾರೆ.

 

೧೦. ದೇಹದಲ್ಲಿ ಚುಚ್ಚಿಕೊಳ್ಳುವುದು

ತಮಿಳುನಾಡಿನ ಅಚ್ಚರಿಯ ಸಂಪ್ರದಾಯಗಳಲ್ಲಿ ಇದೂ ಒಂದು. ಈ ಸಂಪ್ರದಾಯದಲ್ಲಿ ಜನ ಚುಪಾದ ವಸ್ತುಗಳಿಂದ ತಮ್ಮ ದೇಹದಲ್ಲಿ ಚುಚ್ಚಿಕೊಳ್ಳುತ್ತಾರೆ. ತ್ರಿಶೂಲ, ಬಾಣ ಹೀಗೆ ವಿವಿಧ ಆಯುಧಗಳಿಂದ ದೇಹದಲ್ಲಿ ಚುಚ್ಚಿಕೊಳ್ಳುತ್ತಾರೆ. ದೇವರ ಆಶೀರ್ವಾದ ಇರುವುದರಿಂದ ಇದರಿಂದ ನೋವು ಅವರ ಗಮನಕ್ಕೆ ಬರುವುದಿಲ್ಲ ಅನ್ನುವುದು ಅವರ ನಂಬಿಕೆ.

 

೧೧. ಕಪ್ಪೆಗಳ ಮದುವೆ

ಮಹಾರಾಷ್ಟ್ರ ಮತ್ತು ಆಸ್ಸಾಂ ನ ಕೆಲ ಪ್ರದೇಶಗಳಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ ಮಳೆ ದೇವನನ್ನು ಪ್ರಸನ್ನಗೊಳಿಸಿ, ತಮ್ಮ ಪ್ರದೇಶಕ್ಕೆ ಮಳೆ ಬರಲಿ ಅನ್ನುವ ಉದ್ದೇಶದಿಂದ ಕಪ್ಪೆಗಳ ಮದುವೆಯನ್ನು ಮಾಡಲಾಗುತ್ತದೆ

 


Advertisement

आपके विचार


  • Advertisement