ಭಾರತೀಯ ಅತ್ತೆಯರ ಈ ೬ ಸ್ವಭಾವಗಳನ್ನು ಈಗಿನ ಹುಡುಗಿಯರು ಸಹಿಸಿಕೊಳ್ಳುವುದಿಲ್ಲ

Updated on 24 Apr, 2017 at 2:33 pm

Advertisement

ಭಾರತದ ಸಂಬಂಧಗಳಲ್ಲಿ ಮಸಾಲೆಗೆ ಏನೂ ಕಡಿಮೆ ಇರುವುದಿಲ್ಲ. ಅತೀ ಮಸಾಲೆಭರಿತ ಸಂಬಂಧ ಯಾವುದು ಗೊತ್ತೇ? ನಿಸ್ಸಂಶಯವಾಗಿ ಅದು ಅತ್ತೆ-ಸೊಸೆ ಸಂಬಂಧ. ವಿವಿಧ ಬಣ್ಣಗಳಿಂದ ಕೂಡಿದ ಮತ್ತು ಸಿಹಿ-ಕಹಿ ಮಿಶ್ರಿತ ಸಂಬಂಧ ಅತ್ತೆ-ಸೊಸೆಯರದ್ದು. ಅತ್ತೆಯದ್ದು ಒಂದು ಸಲ ಕೈ ಮೇಲಾದರೆ, ಇನ್ನೊಂದು ಸಲ ಸೊಸೆಗೆ ಗೆಲುವು! ಆದರೆ, ಅತ್ತೆಯ ಈ ಸ್ವಭಾವಗಳನ್ನು ಈಗಿನ ಕಾಲದ ಸೊಸೆಯರು ಸಹಿಸಿಕೊಳ್ಳುವುದಿಲ್ಲ.

೬. ನಿನ್ನ ಒಡವೆಗಳನ್ನು ನನಗೆ ಕೊಟ್ಟುಬಿಡು; ನೀನು ಅವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲಾರೆ

ಹಳೆಯ ಕಾಲದ ಅತ್ತೆಯರು ಸೊಸೆಯನ್ನು ಮನೆ ತುಂಬಿಸಿಕೊಂಡ ಮೇಲೆ ಮಾಡುವ ಮೊತ್ತ ಮೊದಲ ಕೆಲಸ ಇದಾಗಿತ್ತು. ಇದರಿಂದಾಗಿ ಈ ಮನೆಯಲ್ಲಿ ‘ನಾನೇ ಬಾಸ್’ ಅಂತಾ ತೋರಿಸಿಕೊಳ್ಳುವ ಇರಾದೆ ಅವರದಿತ್ತು. ಮೊದಲೆಲ್ಲ ಹುಡುಗಿಯರು ಕೊಟ್ಟು ಬಿಡುತ್ತಿದ್ದರೇನೋ, ಆದರೆ ಈಗ ಮಾತ್ರ ಫ್ಯಾಷನ್ ಪ್ರಿಯರಾದ ಹುಡುಗಿಯರು ಇದಕ್ಕೆ ಸೊಪ್ಪು ಹಾಕಲಾರರು. ಅಲ್ಲದೆ, ತಮ್ಮ ವಸ್ತುಗಳನ್ನು ಹೇಗೆ ಜೋಪಾನವಾಗಿ ಇಟ್ಟುಕೊಳ್ಳಬೇಕು ಅನ್ನುವಷ್ಟು ತಿಳುವಳಿಕೆ ಹುಡುಗಿರಲ್ಲಿ ಇದ್ದೇ ಇರುತ್ತದೆ.

 

೫ ನೀನಿದನ್ನು ಮಾಡದಿದ್ದರೆ, ನಿನ್ನ ಕೆನ್ನೆಗೆ ಬಾರಿಸುತ್ತೇನೆ

ಬಾರಿಸುವುದು? ಈಗಿನ ಅತ್ತೆಯರು ಅದನ್ನು ಕಲ್ಪಿಸಿಕೊಳ್ಳುವುದೂ ಆಗುವುದಿಲ್ಲ. ಬಾರಿಸುವುದು ಬಿಡಿ, ಸೊಸೆಗೇನಾದರೂ ಎಚ್ಚರಿಕೆ ಕೊಟ್ಟರೆ, ಮುಂದೆ ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಗಿ ಬರುವುದು ಗ್ಯಾರಂಟಿ! ಕೌಟುಂಬಿಕ ದೌರ್ಜನ್ಯದ ಸಾಕಷ್ಟು ಕೇಸುಗಳು ಈಗಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವುದು ಗೊತ್ತಿರುವ ವಿಚಾರ. ಹೀಗಾಗಿ ದೈಹಿಕವಾಗಿ ಯಾವುದೇ ರೀತಿಯ ನೋವು ನೀಡುವುದು ಅಸಾಧ್ಯದ ಮಾತು.


Advertisement

೪. ನಿನಗೆ ಸಭ್ಯತೆಯ ಬಗ್ಗೆ ಗೊತ್ತಿಲ್ಲವೇ?

ತಮ್ಮ ಮಗನ ಹೆಂಡತಿ ಹೇಗೆ ಮಾತನಾಡುತ್ತಾಳೆ, ನಗುತ್ತಾಳೆ, ನೋಡುತ್ತಾಳೆ, ಇತ್ಯಾದಿಗಳ ಮೇಲೆ ಅತ್ತೆಯರ ಹದ್ದಿನ ಕಣ್ಣು. ಅದನ್ನೇ ಹೆಚ್ಚು ಗಮನವಿಟ್ಟು ನೋಡಿ, ಒಂದು ಚಿಕ್ಕ ತಪ್ಪದಾರೂ ಸಹ ಅದನ್ನು ಎತ್ತಿ ತೋರಿಸುವ ಚಾಳಿ ಕೆಲವು ಅತ್ತೆಯರಿಗೆ. ಆದರೆ, ಈಗಿನ ಸೊಸೆಯರಿಗೆ ಹಾಗೇನಾದರೂ ಹೇಳಿದಲ್ಲಿ ಅವರು ಸುಮ್ಮನೆ ಕುಳಿತುಕೊಳ್ಳುತ್ತಾರೆಯೇ? ಯಾವಾಗ, ಹೇಗೆ ನಡೆದುಕೊಳ್ಳಬೇಕು ಅನ್ನುವುದರ ಅರಿವು ಮೊದಲಿನ ಸೊಸೆಯರಿಗೂ ಇತ್ತು, ಈಗಿನ ಸೊಸೆಯರಿಗೂ ಇದೆ.

೩. ಹೆಣ್ಣು ಮಗುವನ್ನು ಹೆತ್ತರೆ ಜೋಕೆ!

ಹೆಣ್ಣು ಮಗುವನ್ನು ಹೇರುವುದು ಅಪರಾಧವೇ? ಮಗುವನ್ನು ಹೆಣ್ಣು ಹೇರಲಾರದೆ ಮತ್ತೆ ಗಂಡಸರು ಹೇರಲು ಆಗುತ್ತದೆಯೇ? ಒಂದು ಹೆಣ್ಣಾಗಿ ಅತ್ತೆಯ ಈ ಮಾತನ್ನು  ಈಗಿನ ಯಾವ ಸೊಸೆಯೂ ಸಹಿಸಿಕೊಳ್ಳಲಾರಳು.೨. ನೀನು ಮಾಟಗಾತಿ; ನನ್ನ ಮಗನನ್ನು ನನ್ನಿಂದ ಕಿತ್ತುಕೊಂಡೆ!

ಈ ವಿದ್ಯೆಯನ್ನು ನಿನ್ನೆಲ್ಲಿಂದ ಕಲಿತೆ ಅಂತಾ ಅತ್ತೆಯೇನಾದರೂ ಸೊಸೆಯನ್ನು ಕೇಳಿದರೆ ‘ನನ್ನ ಗಂಡನ ಅಮ್ಮನಿಂದ’  ಅಂತಾ ಅನ್ನುವ ಉತ್ತರ ತೂರಿ ಬರುವುದಂತೂ ಗ್ಯಾರಂಟಿ. ಓಬಿರಾಯನ ಕಾಲದಿಂದಲೂ ಅತ್ತೆಯರು ಈ ಮಾತನ್ನು ಆಡುತ್ತಾ ಬಂದಿದ್ದಾರೆ. ಅವರಿಗೆ ತಮ್ಮ ಮಗ ತಾನೇ ಜವಾಬ್ದಾರಿ ತೆಗೆದುಕೊಳ್ಳುವಷ್ಟು ದೊಡ್ಡವನಾಗಿದ್ದಾನೆ ಅಂತಾ ಅನ್ನಿಸುವುದೇ ಇಲ್ಲ.

 

೧. ನಿನ್ನ ತಾಯಿ ಅಡುಗೆ ಮಾಡುವುದನ್ನು ನಿನಗೆ ಕಲಿಸಿಕೊಟ್ಟಿಲ್ಲವೇ?

ಅತ್ತೆಯರು ತಮ್ಮ ಸೊಸೆ ಮೊದಲನೆಯ ದಿನದಿಂದಲೇ ಸ್ವಾದಿಷ್ಟ ಅಡುಗೆ ಮಾಡಬೇಕೆಂದು ಬಯಸುತ್ತಾರೆ. ಆದರೆ, ತಾವೂ ಸಹ ಒಳ್ಳೆಯ ಅಡುಗೆ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿರುವುದನ್ನು ಮರೆತು ಬಿಟ್ಟಿರುತ್ತಾರೆ. ಹುಟ್ಟಿನಿಂದಲೇ ಪಾಕ ಪ್ರವೀಣರಾಗಿರುವುದು ಸಾಧ್ಯವೇ?


Advertisement

आपके विचार


  • Advertisement