ದೇವರಲ್ಲೇ ಅತ್ಯಂತ ಉದಾರಿ ಅಂದರೆ ಶಿವ

Updated on 24 Apr, 2017 at 2:37 pm

Advertisement

೧. ಇತ್ತ ಪುರುಷನೂ ಅಲ್ಲದ, ಇತ್ತ ಮಹಿಳೆಯೂ ಅಲ್ಲದ ‘ಅರ್ಧನಾರೀಶ್ವರ’ ರೂಪದಲ್ಲಿ ಪೂಜಿಸಲ್ಪಡುವ ಏಕೈಕ  ದೇವರೆಂದರೆ ಶಿವ ಒಬ್ಬನೇ.

ಮಹಿಳೆ ಮತ್ತು ಪುರುಷ ಇಬ್ಬರನ್ನೂ ಸಾಂಕೇತಿಕವಾಗಿ ಬಿಂಬಿಸುವ ಶಿವನ ಈ ರೂಪ, ಲಿಂಗ ಅಷ್ಟೇನೂ ಮುಖ್ಯವಲ್ಲ ಅನ್ನುವ ಸಂದೇಶವನ್ನು ಸಾರುತ್ತದೆ.

PodCollective

೨. ಈತ ಹೊಗೆಸೊಪ್ಪನ್ನು ಸೇದುತ್ತಾನೆ. ಈತನ ಭಕ್ತರು ಸೇದಿದರೆ, ಈತನಿಗೆ ಅದರಿಂದ ಬೇಸರವೇನಿಲ್ಲ.

೩. ನೀವು ಈತನಿಗೆ ಏನನ್ನು ಬೇಕಾದರೂ ಸಮಪರ್ಪಿಸಬಹುದು – ಹೊಗೆಸೊಪ್ಪು, ಸಾರಾಯಿ, ಇತ್ಯಾದಿ. ಆತನೇನೂ ತಪ್ಪು ತಿಳಿದುಕೊಳ್ಳುವುದಿಲ್ಲ.

ಉಜೈನಿನ ಕಾಲಭೈರವಣಿಗೆ ಸಾರಾಯಿ ಅರ್ಪಿಸಲಾಗುತ್ತದೆ. ಅಲ್ಲಿನ ಮಹಾಕಾಲನಿಗೆ ಭಸ್ಮದ ಆರತಿಯನ್ನು ಸಹ ಮಾಡಲಾಗುತ್ತದೆ. ಈ ಭಸ್ಮವನ್ನು ಸತ್ತವರನ್ನು ಸುಟ್ಟಮೇಲೆ ಉಳಿಯುವ ಬೂದಿಯಿಂದ ಮಾಡಿರಲಾಗುತ್ತದೆ.


Advertisement

೪. ತಾಂತ್ರಿಕರು ಈತನನ್ನು ಲೈಂಗಿಕತೆಯ ಭಗವಂತ ಅಂತಾ ಪೂಜಿಸುತ್ತಾರೆ. ಇದರಿಂದ ಆತನೇನೂ ತಪ್ಪು ತಿಳಿದುಕೊಳ್ಳುವುದಿಲ್ಲ.

೫. ಮದುವೆ ಆದ ಅಥವಾ ಆಗದ ಮಹಿಳೆಯರು ಇವನನ್ನು ಪೂಜಿಸಬಹುದಾಗಿದೆ.

ಬೇರೆ ಕೆಲ ದೇವರನ್ನು ಪೂಜಿಸುವಾಗ ಲಿಂಗ, ವಯಸ್ಸು, ಮದುವೆ ಆದ ಅಥವಾ ಆಗಿರದ, ಈ ರೀತಿಯ ವಿಷಯಗಳೆಲ್ಲ ಗಣನೆಗೆ ಬರುತ್ತವೆ. ಆದರೆ, ಈತನನ್ನು ಪೂಜಿಸಲು ಇವುಗಳ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.

೬. ರಾಜರಿಂದ ಹಿಡಿದು ಅಘೋರಿ ಗಳ  ವರೆಗೆ ಈತನನ್ನು ಪೂಜಿಸಬಹುದು. ಈತನಿಗೆ ಯಾವುದೇ ಅಂತಸ್ತಿನ ಬಗ್ಗೆ ತಾರತಮ್ಯ ಇಲ್ಲ.

೭. ದೇವತೆ, ಮಾನವ, ಅಸುರರು, ರಾಕ್ಷಸರು, ದಾನವರು, ದೈತ್ಯರು, ಯಕ್ಷರು, ಹೀಗೆ ಎಲ್ಲರೂ ಇವನ ಮುಂದೆ ತಲೆಬಾಗುತ್ತಾರೆ.

(ರಾಕ್ಷಸರು, ದಾನವರು ಮತ್ತು ದೈತ್ಯರು ಈತನನ್ನು ಪೂಜಿಸುವುದಿಲ್ಲ.)

೮. ಲೋಕದ ಒಳಿತಿಗಾಗಿ ಈತ ವಿಷವನ್ನು ಕುಡಿದಿದ್ದ. ಲೋಕಕಲ್ಯಾಣಕ್ಕಾಗಿ ಮಾಡಿದ ಕೆಲಸಗಳಲ್ಲಿ ಇದೂ ಒಂದು.

೯. ತನ್ನ ಹೆಂಡತಿ ಕಡೆಗಿನ ಈತನ ಪ್ರೀತಿ ನಿಜಕ್ಕೂ ತುಂಬಾ ಶುದ್ಧ ಮತ್ತು ಅಗಾಧ. ಹಿಂದಿನ ಅವತಾರದಲ್ಲಿ ಸತಿ ಮತ್ತು ಈಗಿನ ಅವತಾರದಲ್ಲಿ ಪಾರ್ವತಿಯ ರೂಪದಲ್ಲಿ ಈತನ ಹೆಂಡತಿ ಇದ್ದಾಳೆ.

ತಮ್ಮ ಗಂಡ ಶಿವನ ಹಾಗೆ ಇರಬೇಕು ಅಂತಾ ಪ್ರತಿ ಮಹಿಳೆಯು ಬಯಸುತ್ತಾಳೆ.

SATISH GUDLA೧೦. ತನ್ನ ಹೆಂಡತಿ ದುರ್ಗಾ, ಶಕ್ತಿ ಅಥವಾ ಕಾಳಿ ಅಂತಾ ಪೂಜಿಸಲ್ಪಡುತ್ತಿರಬೇಕಾದರೆ, ಈತ ಮರೆಗೆ ಸರಿಯುತ್ತಾನೆ. – ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆ ಅಷ್ಟೇ

೧೧. ತನ್ನ ಭಕ್ತರಿಂದ ಈತ ಇಂಥದ್ದೇ ಬೇಕು ಅಂತಾ ಅಪೇಕ್ಷಿಸುವುದಿಲ್ಲ. ತನಗೇನು ನೀಡುತ್ತಾರೋ, ಅದರಿಂದನೇ ಈತ ಸಂತುಷ್ಟನಾಗುತ್ತಾನೆ.

ಹೀಗಾಗಿ ಶಿವನಿಗೆ ಚಿನ್ನ ಅರ್ಪಿಸಿ ಅಂತಾ ಯಾರೂ ಹೇಳುವುದಿಲ್ಲ.

೧೨. ಮದುವೆಯಾಗಿದ್ದರೂ, ಲೌಕಿಕ ಸುಖಗಳಿಂದ ಈತ ದೂರ

೧೩. ಈತ  ತನ್ನ ವೇಷ ಭೂಷಣಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಈತ ಹಾಕಿಕೊಳ್ಳುವ ಬಟ್ಟೆಗಳ ಬೆಲೆ ತುಂಬಾ ಕಮ್ಮಿ.

೧೪. ತನ್ನ ಭಕ್ತರೂ ಸಹ ಹೀಗೆ ಇರಬೇಕು ಅಂತಾ ಆತ ಬಯಸುವುದಿಲ್ಲ.

ಅವರು ಧರ್ಮದ ದಾರಿಯಲ್ಲಿ ನಡೆದರೆ ಸಾಕು.

೧೫. ಭಕ್ತರು ತಮ್ಮ ಎಡಗೈನಿಂದ ಅವನಿಗೆ ಪೂಜೆ ಸಲ್ಲಿಸಿದರೂ ಆತ ಕುಪಿತನಾಗುವುದಿಲ್ಲ.

೧೬. ಈತನಿಗೆ ಮಾನವರ ಮೇಲೆ ಅಷ್ಟೇ ಅಲ್ಲ, ಪ್ರಾಣಿಗಳ ಮೇಲೆಯೂ ದಯಾ ಭಾವನೆ ಇದೆ. ಅದಕ್ಕಾಗಿಯೇ ಈತನನ್ನು ಪಶುಪತಿನಾಥ ಅಂತಾ ಕರೆಯುತ್ತಾರೆ.

೧೭. ಹಾಗೆ ನೋಡಿದರೆ, ಶಿವ ವಿನಾಶ ಮಾಡುವವನು. ಆದರೆ, ತನ್ನ ಈ ಶಕ್ತಿಯನ್ನು ಆತ ಬಳಸುವುದು ತುಂಬಾ ವಿರಳ. ಏಕೆಂದರೆ, ಈತ ಹೆಚ್ಚಾಗಿ ಕೋಪಗೊಳ್ಳುವುದಿಲ್ಲ.

ಈತ ತುಂಬಾ ಕೋಪ ಮಾಡಿಕೊಂಡಿದ್ದು ಎರಡು ಸಲ. ಒಮ್ಮೆ- ತನ್ನ ಹೆಂಡತಿ ಸತಿ ಸತ್ತಾಗ ಮತ್ತೊಮ್ಮೆ – ಕಾಮದೇವ ಈತನ ವೃತವನ್ನು ಭಂಗಪಡಿಸಲು ಬಂದಾಗ

೧೮. ಬೇರೆ ದೇವರನ್ನು ಈತ ಗೌರವದಿಂದ ಕಾಣುತ್ತಾನೆ.

Vimanika Comics


Advertisement

आपके विचार


  • Advertisement